‘ಡಿಸೆಂಬರ್ 29ರಂದು ನನ್ನ ಜನ್ಮದಿನ. ಅದೇ ದಿನ ದೇವರ ಕೃಪೆಯಿಂದ ಶೇಖ್ ಮೊಹಮ್ಮದ್ ಜತೆ ನನ್ನ ನಿಶ್ಚಿತಾರ್ಥ ನೆರವೇರಿತು ಅಂತ ತಿಳಿಸಲು ಖುಷಿ ಆಗುತ್ತಿದೆ’ ಎಂದು ಖತೀಜಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಖತೀಜಾ ಮದುವೆಯ ವಿಷಯ ತಿಳಿದ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.
ಅಪ್ಪ ರೆಹಮಾನ್ ಅವರಂತೇ ಖತೀಜಾಗೆ ಸಂಗೀತದಲ್ಲಿ ಆಸಕ್ತಿ ಹೆಚ್ಚು. ಗಾಯನದಲ್ಲಿ ತೊಡಗಿಸಿಕೊಂಡಿರುವ ಅವರು ಬಾಲಿವುಡ್ ಹಾಗೂ ತಮಿಳು ಸಿನಿಮಾಗಳಲ್ಲಿಹಲವು ಗೀತೆಗಳನ್ನು ಹಾಡಿದ್ದಾರೆ. ಇನ್ನು ಶೇಖ್ ಮೊಹಮ್ಮದ್ ಎಂಜಿನಿಯರಿಂಗ್ ಪದವಿ ಪಡೆದಿದ್ದು ಉದ್ಯಮಿಯಾಗಿದ್ದಾರೆ.
ರೆಹಮಾನ್ ಅವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳಲ್ಲಿ ಖತೀಜಾ ರೆಹಮಾನ್ ಹಿರಿಯ ಮಗಳು.