ಕೋವಿಡ್‌ಗೆ ಮೊದಲು ಕೆಲವು ಸ್ಟಾರ್‌ಗಳ ಸಿನಿಮಾಗಳು ತೆರೆಗೆ ಬರುವ ಮುಂಚೆಯೇ ಒಂದಷ್ಟು ಬಿಸಿನೆಸ್ ಮಾಡುತ್ತಿದ್ದವು. ಹಿಂದಿನ ಸಿನಿಮಾ ಹಿಟ್ ಆಗಿದ್ದರೆ, ಆ ತಂಡದ ಮತ್ತೊಂದು ಸಿನಿಮಾಕ್ಕೆ ಬೇಡಿಕೆ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ನಿರ್ಮಾಪಕನಿಗೆ ಹಾಕಿದ ಹಣ ಮರಳಿ ಪಡೆಯಲು ಚಿತ್ರ ಮಂದಿರದಲ್ಲಿನ ಗೆಲುವು ಮಹತ್ವದ್ದಾಗಿದೆ.
ಹಿಟ್ ಆದರೂ ಕನ್ನಡ ಸಿನಿಮಾಗಳಿಗೆ ಬೆಲೆಯಿಲ್ಲ. ‘ಕಾಟೇರ’ದಂತಹ ಹಿಟ್ ಸಿನಿಮಾವನ್ನೇ ಒಟಿಟಿ ತೆಗೆದುಕೊಳ್ಳಲಿಲ್ಲ. ಬೇರೆ ಹಕ್ಕುಗಳನ್ನು ಮಾರಾಟ ಮಾಡಲು ಸಾಕಷ್ಟು ಅಲೆದಾಡಿದೆವು. ಡಬ್ಬಿಂಗ್ ಹಕ್ಕು ಇನ್ನೂ ಮಾರಾಟವಾಗಿಲ್ಲ. ಒಟಿಟಿ ಮಾರುಕಟ್ಟೆ ಬಿದ್ದು ಹೋಗಿದೆ. ದೊಡ್ಡ ಹೀರೊಗಳ ಸಿನಿಮಾಗೆ ಈ ಹಕ್ಕು ದೊಡ್ಡ ಮೊತ್ತವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿನ ಕಲೆಕ್ಷನ್ ಶೇಕಡ 50ರಷ್ಟು ಬಿದ್ದು ಹೋಗಿದೆ