ಮಂಗಳವಾರ, ಫೆಬ್ರವರಿ 18, 2020
31 °C

‘ಭಾಗಿ–3’ ಟ್ರೇಲರ್‌: ಟೈಗರ್‌ ಶ್ರಾಫ್ ಮೈಕಟ್ಟಿಗೆ ಅಭಿಮಾನಿಗಳು ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಟೈಗರ್‌ ಶ್ರಾಫ್ ಅಭಿನಯದ ‘ಭಾಗಿ–3’ ಚಿತ್ರದ ಟ್ರೇಲರ್ ಗುರುವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ. 

ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್‌ ಕೂಡ ವೈರಲ್‌ ಆಗಿತ್ತು. 

ಭಾಗಿ-3 ಚಿತ್ರದ ಟ್ರೇಲರ್ ಬಿಡುಗಡೆಯಾಗಿ 2 ಗಂಟೆಯಲ್ಲಿ ಸುಮಾರು 5 ಲಕ್ಷ ಜನರು ಅದನ್ನು ವೀಕ್ಷಿಸಿದ್ದಾರೆ. ಇದು ಶ್ರಾಫ್ ಅವರ ಸಿಕ್ಸ್‌ ಪ್ಯಾಕ್ ಮೈಕಟ್ಟು, ಮೈನವಿರೇಳಿಸುವ ಆಕ್ಷನ್‌ಗೆ ಅಭಿಮಾನಿಗಳು ಫಿದಾ ಆಗಿರುವುದಕ್ಕೆ ಸಾಕ್ಷಿಯಾಗಿದೆ. ಮಾರ್ಚ್‌ 6 ರಂದು ಚಿತ್ರ ಬಿಡುಗಡೆಯಾಗಲಿದೆ.

ಅಹ್ಮದ್ ಖಾನ್ ನಿರ್ದೇಶನದ ಭಾಗಿ 3 ಚಲನಚಿತ್ರವು ಭಾಗಿ ಸರಣಿಯ ಮೂರನೇ ಚಿತ್ರ. ಈ ಹಿಂದೆ ಭಾಗಿ–1 ಮತ್ತು 2 ಎರಡೂ ಬಾಕ್ಸ್‌ ಆಫೀಸ್‌ ಸೂಪರ್‌ ಹಿಟ್‌ ಸಿನಿಮಾಗಳಾಗಿದ್ದವು. ಈಗ ಅದೇ ಸರಣಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈ ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲಿಯೂ ಟೈಗರ್ ಶ್ರಾಫ್ ‘ರಾನಿ’ ಹೆಸರಿನ ಮುಖ್ಯಪಾತ್ರದಲ್ಲಿದ್ದಾರೆ.

‘ಭಾಗಿ 1’ರಲ್ಲಿ ನಾಯಕಿಯಾಗಿದ್ದ ಶ್ರದ್ಧಾ ಕಪೂರ್ ಈ ಚಿತ್ರದ ಮೂಲಕ ‘ಭಾಗಿ’ ಸರಣಿಯಲ್ಲಿ ಮತ್ತೆ ನಾಯಕಿಯಾಗುತ್ತಿದ್ದಾರೆ. ‘ಭಾಗಿ 3’ ಚಿತ್ರದ ಪೋಸ್ಟರ್‌ನಲ್ಲಿರುವ ‘ಈ ಬಾರಿ ದೇಶವೊಂದರ ವಿರುದ್ಧ’ ಎನ್ನುವ ಸಾಲು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಈ ಹಿಂದೆ ಪೋಸ್ಟರ್‌ ಬಿಡುಗಡೆಯಾದ ಸಂದರ್ಭದಲ್ಲಿ ಟೈಗರ್ ಶ್ರಾಫ್ ತಮ್ಮ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡು ‘ಶಕ್ತಿಶಾಲಿ ಶತ್ರುಗಳ ವಿರುದ್ಧ, ದೇಶವೊಂದರ ವಿರುದ್ಧ ದೊಡ್ಡ ಯುದ್ಧಕ್ಕಾಗಿ ರಾನಿ ಮತ್ತೆ ಬಂದಿದ್ದಾನೆ’ ಎಂದು ಬರೆದುಕೊಂಡಿದ್ದರು.

ಈ ಚಿತ್ರವನ್ನು ಸಾಜಿದ್ ನಡಿಯಾವಾಲಾ ನಿರ್ಮಾಣ ಮಾಡಿದ್ದಾರೆ.ಖ್ಯಾತ ನಟಿ ಅಂಕಿತಾ ಲೋಖಂಡೆ, ರಿತೇಶ್‌ ದೇಶ್‌ಮುಖ್‌ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು