ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18ರಂದು ‘ಬಹುಕೃತ ವೇಷಂ’ ತೆರೆಗೆ

Last Updated 16 ಫೆಬ್ರುವರಿ 2022, 10:58 IST
ಅಕ್ಷರ ಗಾತ್ರ

‘ಬಹುಕೃತ ವೇಷಂ’ ಭರ್ಜರಿಯಾಗಿ ತೆರೆಗೆ ಬರುತ್ತಿದೆ. ಫೆ. 18ರಂದು ತೆರೆ ಕಾಣಲಿರುವ ಚಿತ್ರ ರಾಜ್ಯದ 70, ಅಮೆರಿಕದ 25 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ, ಶಶಿಕಾಂತ್ ಪ್ರಧಾನಭೂಮಿಕೆಯಲ್ಲಿರುವ ಚಿತ್ರವಿದು.

‘ಮನುಷ್ಯ ಹೊಟ್ಟೆಪಾಡಿಗಾಗಿ ನಾನಾ ವೇಷ ಹಾಕುತ್ತಾನೆ‌‌. ಇದೇ ಕಥೆಯ ಸಾರಾಂಶ.‌ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರ ನೋಡಿದ ಪ್ರೇಕ್ಷಕರಿಗೆ ನಿರಾಸೆಯಂತೂ ಖಂಡಿತಾ ಆಗುವುದಿಲ್ಲ’ ಎನ್ನುತ್ತಾರೆ ನಟಿ ವೈಷ್ಣವಿ.

ಪ್ರಶಾಂತ್ ಕೆ. ಎರಂಪಳ್ಳಿ ಈ ಚಿತ್ರದ ನಿರ್ದೇಶಕರು. ಇವರು ಈ ಹಿಂದೆ ‘ಗೌಡ್ರು ಸೈಕಲ್’ಚಿತ್ರ ನಿರ್ದೇಶನ ಮಾಡಿದ್ದರು.

ಎಚ್‌. ನಂದ ಹಾಗೂ ಡಿ.ಕೆ.ರವಿ ನಿರ್ಮಾಣದ ಈ ಚಿತ್ರಕ್ಕೆ ಅಧ್ಯಾಯ್ ತೇಜ್ ಕಥೆ ಚಿತ್ರಕಥೆ ಬರೆದಿದ್ದಾರೆ.

ವೈಶಾಖ್ ವಿ. ಭಾರ್ಗವ್ ಅವರು ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಿರಣ್ ಕೃಷ್ಣ ಮೂರ್ತಿ ಅವರು ಇಡೀ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹರ್ಷಕುಮಾರ್‌ ಗೌಡ ಅವರ ಛಾಯಾಗ್ರಹಣವಿದೆ.ಜ್ಞಾನೇಶ್ ಬಿ. ಮಾತಾಡ್ ಅವರ ಸಂಕಲನ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT