ಸೋಮವಾರ, ಜೂನ್ 21, 2021
27 °C

ಹೊಸವರ್ಷಕ್ಕೆ ‘ಬನ್ನಿ ಪಾರ್ಟಿ ಮಾಡೋಣ’ ವಿಡಿಯೊ ಸಾಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2021ರ ಹೊಸವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿಯಿವೆ. ಈ ಹೊಸವರ್ಷದ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿ  ‘ಬನ್ನಿ ಪಾರ್ಟಿ ಮಾಡೋಣ’ ಎಂಬ ವಿಡಿಯೊ ಸಾಂಗ್ ಬಿಡುಗಡೆಯಾಗಲಿದೆ.‌

‘ಸ್ಯಾಂಡಲ್‌ವುಡ್ ಗುರು’ ಎಂಬ ಚಿತ್ರದಲ್ಲಿ ನಟಿಸಿದ್ದ ಮಾನಸ್(ಮ್ಯಾನ್) ಈ ವಿಡಿಯೊ ಸಾಂಗ್ ಅನ್ನು ಬಿಗ್‌ಮ್ಯಾನ್ ಸ್ಟುಡಿಯೊ ಲಾಂಛನದಲ್ಲಿ ನಿರ್ಮಿಸುವುದರೊಂದಿಗೆ, ನಿರ್ದೇಶನವನ್ನೂ ಮಾಡಿದ್ದಾರೆ.

ಮಾನಸ್ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಜೇಮ್ಸ್ ಅವರ ಜೊತೆಗೂಡಿ ಸಂಗೀತವನ್ನು ನೀಡಿದ್ದಾರೆ.

ಮಾನಸ್ ಹಾಗೂ ಸಿರಿಶಾ ಅಭಿನಯಿಸಿರುವ ಈ ಹಾಡು ಮಾನಸ್ ಅವರ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ.

ಪಾರ್ಟಿಪ್ರಿಯರಿಗೆ ಹೇಳಿ ಮಾಡಿಸಿದಂತಿರುವ ಈ ಹಾಡು ಬರೀ ಹೊಸವರ್ಷಕ್ಕಷ್ಟೇ ಸೀಮಿತವಲ್ಲ. ಇದು ಎಲ್ಲಾ ಪಾರ್ಟಿಗಳಿಗೂ ಅನ್ವಯವಾಗುವ ಹಾಗಿದೆ ಎಂಬ ಅನಿಸಿಕೆ ಮಾನಸ್ ಅವರದ್ದು.

ಐದು ನಿಮಿಷಗಳ ಈ ವಿಡಿಯೊ ಸಾಂಗ್‌ನ‌ ತುಣುಕು ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು