ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Movie: ರಾಜೀವ್‌ ಹನುಗೆ ‘ಭೀಮ’ ಬಲ

Published : 20 ಸೆಪ್ಟೆಂಬರ್ 2024, 19:13 IST
Last Updated : 20 ಸೆಪ್ಟೆಂಬರ್ 2024, 19:13 IST
ಫಾಲೋ ಮಾಡಿ
Comments

ಮಂಜು ಕಥೆ ಬರೆದು ನಿರ್ದೇಶಿಸಿರುವ, ‘ಬಿಗ್‌ಬಾಸ್‌’ ಖ್ಯಾತಿಯ ರಾಜೀವ್‌ ಹನು ನಟಿಸಿರುವ ‘ಬೇಗೂರು ಕಾಲೋನಿ’ ಚಿತ್ರದ ಕ್ಯಾರೆಕ್ಟರ್‌ ಮೋಷನ್‌ ಪೋಸ್ಟರ್‌ ಅನ್ನು ನಟ ‘ದುನಿಯಾ’ ವಿಜಯ್‌ ಇತ್ತೀಚೆಗೆ ಬಿಡುಗಡೆಗೊಳಿಸಿದರು. ‌

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್. ಸುರೇಶ್, ಸಂಭಾಷಣೆಗಾರ ಮಾಸ್ತಿ ಉಪಸ್ಥಿತರಿದ್ದರು. ‘ಹೋರಾಟವನ್ನು ಇಟ್ಟುಕೊಂಡು ಮಾಡಿರುವ ಕಥೆಯಂತೆ ಇದು ಕಾಣುತ್ತಿದೆ. ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ. ಕಾಲೋನಿ ಇಲ್ಲದೇ ನಗರ ಆಗುವುದಿಲ್ಲ. ಮಾಲ್ ನಗರ ಆಗುವುದು ಕಾಲೋನಿಯಿಂದ. ಇಡೀ ತಂಡಕ್ಕೆ ಶುಭವಾಗಲಿ’ ಎಂದರು ವಿಜಯ್‌. 

‘ಕಾಲೋನಿಯಲ್ಲಿ ಎಲ್ಲಾ ರೀತಿಯ ಜನ ವಾಸ ಮಾಡುತ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆಯೇ ಈ ಸಿನಿಮಾ. ಇದು ಹೋರಾಟದ ಕಥೆ’ ಎನ್ನುತ್ತಾರೆ ಮಂಜು. ಈ ಚಿತ್ರವನ್ನು ಶ್ರೀಮಾ ಸಿನಿಮಾಸ್ ಬ್ಯಾನರ್‌ನಲ್ಲಿ ಎಂ.ಶ್ರೀನಿವಾಸ್ ಬಾಬು ನಿರ್ಮಾಣ ಮಾಡಿದ್ದು, ರಾಜೀವ್ ಹನು ಸೇರಿದಂತೆ ಮಂಜು, ಪಲ್ಲವಿ ಹರ್ವ, ಕೀರ್ತಿ ಭಂಡಾರಿ, ಬಲ ರಾಜವಾಡಿ ಮತ್ತಿತರರು ಬಣ್ಣ ಹಚ್ಚಿದ್ದಾರೆ. ಪ್ರಮೋದ್ ತಳವಾರ್ ಸಂಕಲನ, ಕಾರ್ತಿಕ್ ಛಾಯಾಚಿತ್ರಗ್ರಹಣ ಹಾಗೂ ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT