ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗೂ ಮುನ್ನ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಮಾಡಿದ ನಟಿ ಆಕಾಂಕ್ಷಾ ದುಬೆ

Last Updated 26 ಮಾರ್ಚ್ 2023, 15:55 IST
ಅಕ್ಷರ ಗಾತ್ರ

ವಾರಾಣಸಿ: ಭೋಜಪುರಿ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಡ್ಯಾನ್ಸರ್ ಆಕಾಂಕ್ಷಾ ದುಬೆ ಅವರು ವಾರಾಣಸಿಯ ಹೋಟೆಲ್‌ ಒಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ವರದಿಯಾಗಿದೆ.

ಆಕಾಂಕ್ಷಾ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಪ್ರಾಥಮಿಕವಾಗಿ ಇದೊಂದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಿದ್ದಾರೆ. ಆದರೆ ಆಕಾಂಕ್ಷಾ ಅವರು ಸಾವಿಗೂ ಮುನ್ನ ಇನ್‌ಸ್ಟಾಗ್ರಾಂನಲ್ಲಿ ಲೈವ್ ವಿಡಿಯೊ ಮಾಡಿ ಕಣ್ಣೀರಿಟ್ಟಿದ್ದಾರೆ.

ಈ ವಿಡಿಯೊ ಭಾನುವಾರ ಬೆಳಿಗ್ಗೆ 2.35ಕ್ಕೆ ಲೈವ್ ಆಗಿದೆ. ಭೋಜಪುರಿಯಲ್ಲಿ ಮಾತನಾಡಿರುವ ನಟಿ, ನನಗೆ ಮೋಸವಾಗಿದೆ ಎಂದು ಹೇಳುತ್ತಿರುವುದು ಅದರಲ್ಲಿ ಕಂಡು ಬಂದಿದೆ. ಮೊಬೈಲ್‌ನ್ನು ಲೈವ್‌ ಅಲ್ಲಿಯೇ ಇಟ್ಟು ಅವರು ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

25 ವರ್ಷದ ಈ ನಟಿ ತಮ್ಮ ಮುಂದಿನ ಚಿತ್ರಕ್ಕಾಗಿ ವಾರಾಣಸಿಯಲ್ಲಿ ಶೂಟಿಂಗ್‌ಗೆ ತೆರಳಿದ್ದರು. ತಮ್ಮ ಪಾಲಿನ ಶೂಟಿಂಗ್ ಮುಗಿಸಿ ವಾರಾಣಸಿಯ ಸಾರಾನಾಥ್ ಹೋಟೆಲ್‌ನಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿಯಿಂದ ಘಟನೆ ಬೆಳಕಿಗೆ ಬಂದಿದೆ.

ಭೋಜಪುರಿ ಚಿತ್ರರಂಗದ ಕನಸಿನ ರಾಣಿಯಂದು ಗುರುತಿಸಿಕೊಂಡಿದ್ದ ಮಿರ್ಜಾಪುರ್ ಮೂಲದ ಆಕಾಂಕ್ಷಾ ಅವರು ಐಎಎಸ್ ಅಧಿಕಾರಿ ಆಗಬೇಕೆಂದುಕೊಂಡು ಮುಂಬೈ ಸೇರಿದ್ದರು. ಆದರೆ, ಅಲ್ಲಿಂದ ಭೋಜಪುರಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹೆಸರು ಮಾಡಿದ್ದರು.

ನಿನ್ನೆಯಷ್ಟೇ ಅವರು ಬೆಲ್ಲಿ ಡ್ಯಾನ್ಸ್‌ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಭೋಜಪುರಿಯ ಮೇರಿ ಜಂಗ್, ಮೇರಿ ಪೈಸಲಾ, ಮುಜಸೆ ಶಾದಿ ಕರೋಗೆ (ಭೋಜಪುರಿ), ವೀರೋನ್ ಕಿ ವೀರ, ಕಸಮ್ ಪೈದಾ ಕರನೇ ಕಿ 2 ಸಿನಿಮಾಗಳಲ್ಲಿ ಮಿಂಚಿದ್ದಲ್ಲದೇ ಆಕಾಂಕ್ಷಾ ಹಲವು ಭೋಜಪುರಿ ಮ್ಯುಸಿಕ್ ಅಲ್ಬಂಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.

ಆಕಾಂಕ್ಷಾ ಅವರು ಇತ್ತೀಚೆಗೆ ಸಮರ್ ಸಿಂಗ್ ಎನ್ನುವ ನಟರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಆಕಾಂಕ್ಷಾ ಸಾವಿನ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಾರಾಣಸಿಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT