ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸಮ್ಮಾನ | ಅತ್ಯುತ್ತಮ ನಟಿ ರುಕ್ಮಿಣಿ ವಸಂತ್; ಸಪ್ತ ಸಾಗರದ ಚೆಲುವೆಗೆ ಗರಿ

Published 4 ಜುಲೈ 2024, 23:25 IST
Last Updated 4 ಜುಲೈ 2024, 23:25 IST
ಅಕ್ಷರ ಗಾತ್ರ

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿನ ನಟನೆಗಾಗಿ ನಟಿ ರುಕ್ಮಿಣಿ ವಸಂತ್‌ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಚಿಕೊಂಡರು. 

ಲಂಡನ್‌ನ ‘ರಾಯಲ್‌ ಅಕಾಡೆಮಿ ಆಫ್‌ ಡ್ರಾಮಾಟಿಕ್‌ ಆರ್ಟ್ಸ್‌’ನಲ್ಲಿ ತರಬೇತಿ ಪಡೆದು ಸಿನಿಮಾ ಕ್ಷೇತ್ರಕ್ಕೆ ಧುಮುಕಿದ್ದ ರುಕ್ಮಿಣಿ ‘ಬೀರ್‌ಬಲ್‌’ ಬೆಡಗಿಯಾಗಿ ಚಂದನವನ ಪ್ರವೇಶಿಸಿದರು. ರುಕ್ಮಿಣಿ ವಸಂತ್ ಸಿನಿ ಜರ್ನಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ದೊಡ್ಡ ತಿರುವು ನೀಡಿತ್ತು. ತಮ್ಮ ಸಹಜ ನಟನೆಯಿಂದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ‘ಪ್ರಿಯಾ’ ಎಂಬ ಪಾತ್ರಕ್ಕೆ ರುಕ್ಮಿಣಿ ಜೀವತುಂಬಿದ್ದರು. ಬಳಿಕ ‘ಬಾನದಾರಿಯಲ್ಲಿ’ ಹಾರಿದ ರುಕ್ಮಿಣಿ, ಇದೀಗ ಶ್ರೀಮುರಳಿಯ ‘ಬಘೀರ’, ಶಿವರಾಜ್‌ಕುಮಾರ್‌ ಅವರ ‘ಭೈರತಿ ರಣಗಲ್‌’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಲಿವುಡ್‌ಗೂ ಹೆಜ್ಜೆ ಇಟ್ಟಿರುವ ರುಕ್ಮಿಣಿ, ಬಹುಭಾಷಾ ನಟ ವಿಜಯ್‌ ಸೇತುಪತಿ ಅವರೊಂದಿಗೆ ತೆರೆಹಂಚಿಕೊಂಡಿದ್ದಾರೆ. 

‘ಸಿನಿಮಾ ಮಾಡುತ್ತಿರುವ ಸಂದರ್ಭದಲ್ಲಿ ಪ್ರಶಸ್ತಿ ಬಗ್ಗೆ ಯೋಚನೆ ಇರುವುದಿಲ್ಲ. ಆ ಸಂದರ್ಭದಲ್ಲಿ ಕೇವಲ ಪಾತ್ರದ ಬಗ್ಗೆ, ಕಥೆಯ ಬಗ್ಗೆ ಯೋಚಿಸುತ್ತಿರುತ್ತೇವೆ. ಸಿನಿಮಾ ಬಿಡುಗಡೆಗೊಂಡ ಬಳಿಕ ಈ ರೀತಿ ಗುರುತಿಸುವುದು ಮುಖ್ಯವಾಗುತ್ತದೆ. ನಮಗೂ ಇದು ದೊಡ್ಡ ಪ್ರೋತ್ಸಾಹ. ಇಂತಹ ಪ್ರಶಸ್ತಿಗಳು ನಮ್ಮ ಪ್ರಯತ್ನ ಜನರಿಗೆ ತಲುಪಿದೆ ಎನ್ನುವ ನಂಬಿಕೆ ಮೂಡಿಸುತ್ತದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ದೊಡ್ಡ ಗ್ಯಾಪ್‌ ಬಳಿಕ ದೊರಕಿತ್ತು. ಜನರು ನನ್ನನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಆ ಸಂದರ್ಭದಲ್ಲಿ ಇತ್ತು. ಇದೀಗ ಅವೆಲ್ಲವೂ ಹೊರಟುಹೋಗಿದೆ’ ಎನ್ನುತ್ತಾರೆ ನಟಿ ರುಕ್ಮಿಣಿ ವಸಂತ್‌.

ನಾಮನಿರ್ದೇಶನಗೊಂಡಿದ್ದವರು...

ಸಿಂಧು ಶ್ರೀನಿವಾಸಮೂರ್ತಿ | ಚಿತ್ರ: ಆಚಾರ್‌ & ಕೋ.

ಸಿರಿ ರವಿಕುಮಾರ್‌ | ಚಿತ್ರ: ಸ್ವಾತಿ ಮುತ್ತಿನ ಮಳೆ ಹನಿಯೇ

ರುಕ್ಮಿಣಿ ವಸಂತ್‌ | ಚಿತ್ರ: ಸಪ್ತ ಸಾಗರದಾಚೆ ಎಲ್ಲೋ

ಅಕ್ಷತಾ ಪಾಂಡವಪುರ | ಚಿತ್ರ: ಪಿಂಕಿ ಎಲ್ಲಿ?

lಮಿಲನ ನಾಗರಾಜ್‌ | ಚಿತ್ರ: ಕೌಸಲ್ಯಾ ಸುಪ್ರಜಾ ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT