‘ಕಾನ್‌ಸ್ಟೆಬಲ್ ಸರೋಜಾ’ ಹೀಗೆಂದ ಕೂಡಲೇ ಪಡ್ಡೆಗಳ ಮೈ ಒಮ್ಮೆ ಬೆಚ್ಚಗಾಗುತ್ತದೆ. ಖಾಕಿ ಸೀರೆಯುಟ್ಟ ನೀಳಕಾಯದ ಸುಂದರಿಯೊಬ್ಬಳ ಚಿತ್ರವೊಂದ ಮನಸಲ್ಲಿ ಸರ್ರನೇ ಹಾದು ಹೋಗುತ್ತದೆ. ಅದು ‘ಟಗರು’ ಸಿನಿಮಾದಲ್ಲಿಕಾನ್‌ಸ್ಟೆಬಲ್ ಸರೋಜಾ ಪಾತ್ರ ಬೀರಿದ್ದ ಪ್ರಭಾವ. ಸಣ್ಣ ಅವಧಿಯಲ್ಲಿ ಬಂದುಹೋಗುವ ಪಾತ್ರ ಅದಾದರೂ ತ್ರಿವೇಣಿ ರಾವ್ ಅವರ ವೃತ್ತಿಜೀವನಕ್ಕೊಂದು ಗಟ್ಟಿ ನೆಲೆಕೊಟ್ಟಿದ್ದಂತೂ ನಿಜ.

ಇದೀಗ ಸರೋಜ ಬಣ್ಣದ ಬದುಕಿನ ಪಯಣದಲ್ಲಿ ಮತ್ತೊಂದು ಎತ್ತರಕ್ಕೆ ಜಿಗಿದಿದ್ದಾರೆ. ಅಮಿತಾಬ್ ಬಚ್ಚನ್, ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್, ನಟಿ ನಯನ ತಾರಾ, ತಮನ್ನಾ ಹಾಗೂ ಜಗಪತಿ ಬಾಬುಮುಖ್ಯಪಾತ್ರದಲ್ಲಿ ನಟಿಸುತ್ತಿರುವ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ತ್ರಿವೇಣಿ ರಾವ್ ಕೂಡ ನಟಿಸುತ್ತಿದ್ದಾರಂತೆ!

ಈ ಸುದ್ದಿಯನ್ನು ಅವರೇ ದೃಢೀಕರಿಸಿದ್ದು, ‘ಜಾರ್ಜಿಯಾದಲ್ಲಿ ನನ್ನ ನಟನೆಯ ಭಾಗದ ಚಿತ್ರೀಕರಣ ಇತ್ತು. ಸುದೀಪ್ ಅವರೂ ಬಂದಿದ್ದರು. ಅಲ್ಲಿ ಹದಿನೈದು ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ನನ್ನ ಪಾತ್ರದ ಹೆಸರು ಪಾರ್ವತಿ. ಚಿರಂಜೀವಿ ಅವರ ಜತೆಗೇ ಇರುವ ಪಾತ್ರ ನನ್ನದು. ಯುದ್ಧದ ಸನ್ನಿವೇಶದಲ್ಲಿ ನನ್ನ ಮತ್ತು ಬ್ರಿಟಿಷ್ ನಡುವೆ ಒಂದು ಘರ್ಷಣೆ ನಡೆಯುತ್ತದೆ. ಅದರಲ್ಲಿ ನನ್ನನ್ನು ಚಿರಂಜೀವಿ ರಕ್ಷಿಸುತ್ತಾರೆ. ಅಲ್ಲಿಂದ ನಾನು ಅವರ ಜತೆಯಲ್ಲಿಯೇ ಇರುತ್ತೇನೆ. ನನ್ನ ಜತೆಗೆ ಇನ್ನೂ ಮೂವರು ಹುಡುಗಿಯರು ಇರುತ್ತಾರೆ’ ಎಂದು ಪಾತ್ರದ ಬಗ್ಗೆ ಅವರು ವಿವರಿಸುತ್ತಾರೆ.

‘ಇದು ತುಂಬ ವಿಭಿನ್ನ ಚಿತ್ರ. ಅಷ್ಟು ದೊಡ್ಡ ಚಿತ್ರದಲ್ಲಿ ಪಾತ್ರ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಚಿರಂಜೀವಿ ಅವರಂಥ ಮೇರು ಕಲಾವಿದರ ಜತೆ ನಟಿಸುವ ಧನ್ಯತೆಯೂ ದೊರಕಿದೆ’ ಎನ್ನುತ್ತಾರೆ ತ್ರಿವೇಣಿ.

ತ್ರಿವೇಣಿ ನಾಯಕಿಯಾಗಿ ನಟಿಸಿರುವ ‘ಚೌಪದಿ’ ಮತ್ತು ‘ರಾಜಾ ಮಾರ್ತಾಂಡ’ ಚಿತ್ರಗಳೂ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ‘ಸೈರಾ ನರಸಿಂಹ ರೆಡ್ಡಿ ತಮ್ಮ ವೃತ್ತಿಬದುಕಿಗೊಂದು ಹೊಸ ತಿರುವು ನೀಡಲಿದೆ’ ಎಂಬ ಆಶಾವಾದವೂ ಅವರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.