ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ ಕೋವಿಡ್‌ 19 ಗೆದ್ದುಬಂದ ‘ಪೊಗರು’ ನಾಯಕ

Last Updated 23 ಜುಲೈ 2020, 5:35 IST
ಅಕ್ಷರ ಗಾತ್ರ

ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಶಂಕರ್ ಈಗ ಸೋಂಕಿನಿಂದ ಗುಣಮುಖರಾಗಿದ್ದು, ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್‌ ಫಲಿತಾಂಶ ಬಂದಿದೆ.

‘ನಾನು ಮತ್ತು ನನ್ನ ಪತ್ನಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ವರದಿ ಫಲಿತಾಂಶ ನೆಗೆಟಿವ್‌ ಬಂದಿದೆ. ನಿಮ್ಮೆಲ್ಲರ ಹಾರೈಕೆ ಮತ್ತು ಬಹುಶಃನನ್ನ ಅಣ್ಣ ಚಿರುವಿನ ಆಶೀರ್ವಾದದಿಂದ ನಾನು ಗುಣಮುಖರಾಗಿದ್ದೇವೆ. ನನ್ನ ಚಿಕ್ಕಪ್ಪ ಮತ್ತು ಎಲ್ಲ ಸಂದರ್ಭದಲ್ಲೂನನ್ನೊಂದಿಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಹೇಳುತ್ತೇವೆ. ಅದರಲ್ಲೂ ನಮಗೆ ಚಿಕಿತ್ಸೆ ನೀಡಿದ ಡಾ.ಸುರ್ಜಿತ್‌ ಪಾಲ್‌ ಸಿಂಗ್‌ ಮತ್ತು ವೈದ್ಯಕೀಯ ಸಹಾಯಕ ರಾಜ್‌ಕುಮಾರ್‌ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಬಯಸುತ್ತೇವೆ’ ಎಂದು ಧ್ರುವ ಟ್ವೀಟ್‌ ಮಾಡಿದ್ದಾರೆ.

ಜುಲೈ 15ರಂದು ಧ್ರುವ 'ನಾನು ಮತ್ತು ನನ್ನ ಪತ್ನಿಗೆ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆದರೆ ತುಂಬ ಕಡಿಮೆ ಲಕ್ಷಣಗಳಿವೆ. ಹೀಗಾಗಿ ನಾವು ಆಸ್ಪತ್ರೆಗೆ ದಾಖಲಾಗಿದ್ದೇವೆ. ಬೇಗ ಹುಷಾರಾಗುವ ನಂಬಿಕೆಯಿದೆ. ನಮ್ಮ ಜೊತೆ ಯಾರೆಲ್ಲಾ ಸಂಪರ್ಕದಲ್ಲಿದ್ದೀರೋ ಅವರೆಲ್ಲ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳಿ,ಹುಷಾರಾಗಿ' ಎಂದು ‌ಟ್ವಿಟರ್‌ನಲ್ಲಿ ಮನವಿ ಮಾಡಿದ್ದರು.

ಧ್ರುವ ಸರ್ಜಾ ನಟಿಸಿರುವ ಬಹುನಿರೀಕ್ಷೆಯ ಚಿತ್ರ‘ಪೊಗರು’ ಇನ್ನಷ್ಟೇ ತೆರೆಕಾಣಬೇಕಿದೆ. ಈ ಚಿತ್ರದ ‘ಖರಾಬು’ ವಿಡಿಯೊ ಸಾಂಗ್‌ ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT