ಶನಿವಾರ, ಜನವರಿ 18, 2020
19 °C

ಪುತ್ರನ ಜೊತೆಗೆ ದರ್ಶನ್‌ ಕುದುರೆ ಸವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರುಣ್‌ ಸುಧೀರ್‌ ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರದ ಶೂಟಿಂಗ್‌ ಬಹುತೇಕ ಪೂರ್ಣಗೊಂಡಿದೆ. ಹೊಸ ವರ್ಷದ ಮೊದಲ ದಿನವೇ ಈ ಚಿತ್ರದ ಡಬ್ಬಿಂಗ್‌ ಪ್ರಕ್ರಿಯೆಯಲ್ಲೂ ದಚ್ಚು ಪಾಲ್ಗೊಂಡಿದ್ದರು. ಶೀಘ್ರವೇ, ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ರಾಜವೀರ ಮದಕರಿನಾಯಕ’ ಚಿತ್ರದ ಶೂಟಿಂಗ್‌ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ದರ್ಶನ್‌ ಮಗನೊಟ್ಟಿಗೆ ಈಗ ಮೈಸೂರು ಸಮೀಪದ ತಮ್ಮ ‘ತೂಗುದೀಪ ಫಾರ್ಮ್‌ಹೌಸ್‌’ನಲ್ಲಿ ಹೊಸ ವರ್ಷದ ಸಂಭ್ರಮದಲ್ಲಿ ಮುಳುಗಿದ್ದಾರೆ. ದರ್ಶನ್‌ ಅವರು ‍ಪುತ್ರನೊಟ್ಟಿಗೆ ಅಲ್ಲಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲಕ್ಕೆ ಅವರೇ ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಹರಿಬಿಟ್ಟಿದ್ದಾರೆ. ತನ್ನ ಮಗನಿಗೆ ಅವರು ಕುದುರೆ ಸವಾರಿಯ ಪಟ್ಟುಗಳನ್ನು ಹೇಳಿಕೊಡುತ್ತಿದ್ದು, ಈ ವಿಡಿಯೊ ವೈರಲ್‌ ಆಗಿದೆ.

ದರ್ಶನ್‌ ಪ್ರಾಣಿಪ್ರಿಯರು ಹೌದು. ಅವರ ಫಾರ್ಮ್‌ಹೌಸ್‌ನಲ್ಲಿ ಕುದುರೆ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ಫಾರ್ಮ್‌ಹೌಸ್‌ಗೆ ಭೇಟಿ ನೀಡಿದಾಗಲೆಲ್ಲಾ ಕುದುರೆ ಸವಾರಿ ಮಾಡುವುದು ಅವರ ಹವ್ಯಾಸ. ಮಗನಿಗೆ ದರ್ಶನ್‌ ಅವರು ಕುದುರೆ ಸವಾರಿಯನ್ನು ಹೇಳಿಕೊಡುತ್ತಿರುವುದಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು