ಮುಂಬೈ: 2023ರ ಆಸ್ಕರ್ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಪ್ರತಿನಿಧಿಯಾಗಿ ಭಾಗವಹಿಸಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಮೆರಿಕಕ್ಕೆ ತೆರಲಿದ್ದಾರೆ.
ದೀಪಿಕಾ ವಿಮಾನ ನಿಲ್ದಾಣದಲ್ಲಿ ಆಕೆಯ ಪತಿ ಮತ್ತು ನಟ ರಣವೀರ್ ಸಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ದೀಪಿಕಾರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ದೀಪಿಕಾ ಡೆನಿಮ್ ಜೊತೆಗೆ ಕಪ್ಪು ಬ್ಲೇಜರ್ ಧರಿಸಿ ತನ್ನ ಕಾರಿನಿಂದ ಇಳಿಯುತ್ತಿದ್ದು, ಆಕೆಯನ್ನು ಡ್ರಾಪ್ ಮಾಡುವಾಗ ಕಾರಿನೊಳಗೆ ರಣವೀರ್ ಕಾಣಿಸಿಕೊಂಡಿದ್ದಾರೆ.
ಮಾರ್ಚ್ 12ರಂದು ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಆಸ್ಕರ್ ಸಮಾರಂಭದಲ್ಲಿ ಎಮಿಲಿ ಬ್ಲಂಟ್, ಸ್ಯಾಮ್ಯುಯೆಲ್ ಜಾಕ್ಸನ್ ಮತ್ತು ಡ್ವೇನ್ ಜಾನ್ಸನ್ ಅವರಂತಹ ಜಾಗತಿಕ ತಾರೆಗಳೊಂದಿಗೆ ನಟಿ ಕಾಣಿಸಿಕೊಳ್ಳಲಿದ್ದಾರೆ.
ದೀಪಿಕಾ, 2023ರ 95ನೇ ಆಸ್ಕರ್ ಪಟ್ಟಿಯಲ್ಲಿರುವ ತಮ್ಮ ಹೆಸರನ್ನು ಇನ್ಸ್ಟಾಗ್ರಾಮ್ ಮೂಲಕ ಪ್ರಕಟಿಸಿದ್ದಾರೆ. ಆಸ್ಕರ್‌ನ ಭಾಗವಹಿಸುವ ಸೆಲೆಬ್ರಿಟಿ ಪ್ರತಿನಿಧಿ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಪಟ್ಟಿಯಲ್ಲಿ ಸ್ಯಾಮ್ಯುಯೆಲ್ ಜಾಕ್ಸನ್, ಜೊ ಸಲ್ಡಾನಾ, ಡ್ವೇನ್ ಜಾನ್ಸನ್ ಮತ್ತು ರಿಜ್ ಅಹ್ಮದ್ ತಾರೆಗಳೊಂದಿಗೆ ಅವರ ಹೆಸರು ಸೇರಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.