ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್ ಪೂರ್ವಾನುಮತಿ ಇಲ್ಲದೇ ವಿದೇಶಕ್ಕೆ ತೆರಳಲು ನಟಿ ಜಾಕ್ವೆಲಿನ್‌ಗೆ ಅವಕಾಶ

ಷರತ್ತು ಮಾರ್ಪಡಿಸಿದ ದೆಹಲಿ ಕೋರ್ಟ್
Published 16 ಆಗಸ್ಟ್ 2023, 13:44 IST
Last Updated 16 ಆಗಸ್ಟ್ 2023, 13:44 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ವಿದೇಶಕ್ಕೆ ಹೋಗಲು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿ ನ್ಯಾಯಾಯಲಯವು ಅನುಮತಿ ನೀಡಿದೆ.

 ₹ 200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಂಚಕ ಸುಕೇಶ್‌ ಚಂದ್ರಶೇಖರ್ ಜೊತೆಗೆ ಜಾಕ್ವೆಲಿನ್ ಕೂಡ ಆರೋಪಿಯಾಗಿದ್ದು, ಅವರಿಗೆ ನೀಡಿರುವ ಜಾಮೀನಿನ ಷರತ್ತಿನಲ್ಲಿ ನ್ಯಾಯಾಲಯವು ಮಾರ್ಪಾಡು ಮಾಡಿದೆ. 

‘ದೇಶದಿಂದ ಹೊರಹೋಗುವ ಮೂರು ದಿನಗಳ ಮುನ್ನ ನ್ಯಾಯಾಲಯದ ಪೂರ್ವಾನುಮತಿ ಪಡೆಯುವ ಬದಲು ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಗಮನಕ್ಕೆ ತರಬೇಕು’ ಎಂದೂ ನ್ಯಾಯಾಲಯವು ನಿರ್ದೇಶನ ನೀಡಿದೆ. 

ವಿಶೇಷ ನ್ಯಾಯಮೂರ್ತಿ ಶೈಲೇಂದ್ರ ಮಲ್ಲಿಕ್ ಅವರು ಕಳೆದ ವರ್ಷ ನ. 15ರಂದು ಜಾಕ್ವೆಲಿನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT