ಸೋಮವಾರ, ಸೆಪ್ಟೆಂಬರ್ 20, 2021
21 °C

ಕ್ರಿಕೆಟರ್ ರೋಹಿತ್ ಜೊತೆ ಸಪ್ತಪದಿ ತುಳಿದ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖ್ಯಾತ ನಿರ್ದೇಶಕ ಎಸ್. ಶಂಕರ್ ಅವರ ಪುತ್ರಿ ಐಶ್ವರ್ಯಾ ಅವರು ಕ್ರಿಕೆಟಿಗ ರೋಹಿತ್ ದಾಮೋದರನ್ ಜತೆ ಭಾನುವಾರ ದಾಂಪತ್ಯ ಬದುಕಿಗೆ ಕಾಲಿಟ್ಟರು.

ಮಹಾಬಲಿಪುರಂನಲ್ಲಿ ಸೀಮಿತ ಸಂಖ್ಯೆಯ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ  ಪುತ್ರ ಉದಯನಿಧಿ ಸ್ಟಾಲಿನ್, ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮಾ ಸುಬ್ರಮಣಿಯಂ ಮದುವೆಗೆ ಬಂದಿದ್ದರು.

ಐಶ್ವರ್ಯಾ ಹಾಗೂ ರೋಹಿತ್ ಅವರ ವಿವಾಹದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನವ ದಂಪತಿಗೆ ಶುಭಾಶಯಗಳು ಹರಿದುಬಂದಿವೆ. ಕೋವಿಡ್‌ ಆತಂಕ ನಿವಾರಣೆ ಆದ ಬಳಿಕ ಚೆನ್ನೈನಲ್ಲಿ ಆರತಕ್ಷತೆ ನಡೆಸಲು ನಿರ್ದೇಶಕ ಶಂಕರ್ ನಿರ್ಧರಿಸಿದ್ದಾರೆ.

ರೋಹಿತ್ ದಾಮೋದರನ್ ಅವರು ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್‌)ನ ಆಟಗಾರ. ರೋಹಿತ್ ತಂದೆ ದಾಮೋದರನ್ ಉದ್ಯಮಿ. ಟಿಎನ್‌ಪಿಎಲ್‌ನ ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಒಡೆತನವನ್ನು ದಾಮೋದರನ್ ಹೊಂದಿದ್ದಾರೆ. ರೋಹಿತ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ಅವರು ವೈದ್ಯರಾಗಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು