ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಪಟನೆ ಕಿಕ್‌ ಕೊಟ್ಟ ಪಟಾನಿ

Last Updated 25 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಫ್ಯಾಷನ್‌ ಪ್ರಜ್ಞೆ ಮತ್ತು ಟ್ರೆಂಡ್‌ಗಳಿಗೆ ಸದಾ ಅಪ್‌ಡೇಟ್‌ ಆಗುತ್ತಲೇ ನಟಿ ದಿಶಾ ಪಟಾನಿ ಅಷ್ಟೆತ್ತರ ಜಿಗಿದು ಎರಡೂ ಕಾಲುಗಳಿಂದ ಕೊಟ್ಟ ಕಿಕ್‌ ನೋಡಿದರೆ ಒಮ್ಮೆ ಮೈ ಜುಮ್ಮೆನ್ನದೇ ಇರದು. ಅವರಿಂದ ಒದೆ ತಿಂದವರಾರು? ಒದೆ ಕೊಟ್ಟಿದ್ದಾದರೂ ಯಾಕೆ ಎಂದು ಯೋಚಿಸುತ್ತಿದ್ದೀರಾ?

‘ಭರತ್‌’ ಸಿನಿಮಾಕ್ಕಾಗಿ ಕಿಕ್ಕಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೊ ತುಣುಕಿನಲ್ಲಿ ಅವರು ಐದಾರು ಅಡಿ ಎತ್ತರ ಜಿಗಿದು ಕಿಕ್‌ ನೀಡುತ್ತಿರುವ ದೃಶ್ಯ ದಂಗುಬಡಿಸುವಂತಿದೆ.

ಫ್ಯಾಷನ್‌ ಪ್ರಜ್ಞೆ ಮತ್ತು ಟ್ರೆಂಡ್‌ಗಳಿಗೆ ಸದಾ ಅಪ್‌ಡೇಟ್‌ ಆಗುತ್ತಾ ಆ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಹೊಸ ಚಿತ್ರಕ್ಕೆ ಸಹಿ ಹಾಕಿದ ಬೆನ್ನಿಗೇ ಅದಕ್ಕೆ ಅವರು ನಡೆಸುವ ತಯಾರಿ, ಗೆಟಪ್ಪುಗಳ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುವುದೂ ಅವರಿಗೆ ಅಚ್ಚುಮೆಚ್ಚು. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಕೋಟಿಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದಿಶಾ ಅವರ ಹೊಸ ಫೋಟೊ ಅಥವಾ ವಿಡಿಯೊ ಲಕ್ಷಾಂತರ ಲೈಕ್‌ ಪಡೆಯುತ್ತದೆ. ಕಿಕ್ಕಿಂಗ್‌ ವಿಡಿಯೊ ಕೂಡಾ ಸಾವಿರಾರು ಮಂದಿಯ ಗಮನ ಸೆಳೆದಿದೆ.

‘ಭರತ್’ ಸಿನಿಮಾ, 2014ರಲ್ಲಿ ತೆರೆಕಂಡ ದಕ್ಷಿಣ ಕೊರಿಯಾದ ಸಿನಿಮಾ ‘ಓಡ್‌ ಟು ಮೈ ಫಾದರ್‌’ನ ಹಿಂದಿ ಆವೃತ್ತಿಯಾಗಿದೆ. ‌ನಾಯಕ ಭರತ್‌ ಪಾತ್ರದಲ್ಲಿ ಸಲ್ಲೂ ಭಾಯ್‌, ರಾಧಾ (ದಿಶಾ ಪಟಾನಿ) ಪಾತ್ರಕ್ಕೆ ಶಿಕ್ಷಕಿ ಹಾಗೂ ಭರತ್‌ ಪ್ರೇಮಿಯಾಗಿ ಕತ್ರಿನಾ, ಭರತ್‌ ಪತ್ನಿ ಸ್ಮೃತಿಯಾಗಿ ಟಬು ನಟಿಸಲಿದ್ದಾರೆ. ಉಳಿದಂತೆ ಸುನಿಲ್‌ ಗ್ರೋವರ್‌, ಜಾಕಿ ಶ್ರಾಫ್‌ ಪ್ರಮುಖ ಪಾತ್ರಗಳನ್ನು ಮಾಡಲಿದ್ದಾರೆ.

‘ಭರತ್’ನಲ್ಲಿ ಸಿಕ್ಕಿದ ಈ ಅವಕಾಶ ತಮ್ಮ ಸಿನಿಯಾನದಲ್ಲಿ ಮಹತ್ವದ್ದು ಎಂದು ಹೇಳಿರುವ ದಿಶಾ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2015ರಲ್ಲಿ ತೆಲುಗಿನ ‘ಲೋಫರ್‌’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ದಿಶಾ ಇದುವರೆಗೂ ವರ್ಷಕ್ಕೆ ಒಂದು ಅಥವಾ ಎರಡು ಚಿತ್ರಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT