ದಿಶಾ ಬರ್ತ್‌ಡೇ

ಗುರುವಾರ , ಜೂಲೈ 18, 2019
29 °C
ದಿಶಾ ಪಟಾನಿ ಹುಟ್ಟುಹಬ್ಬ

ದಿಶಾ ಬರ್ತ್‌ಡೇ

Published:
Updated:
Prajavani

ಬಾಲಿವುಡ್‌ನ ಇತ್ತೀಚಿನ ರೊಮ್ಯಾಂಟಿಕ್ ಜೋಡಿಯೆಂದೇ ಖ್ಯಾತವಾಗಿರುವ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫರ್ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ. 

‘ತಾವಿಬ್ಬರೂ ಒಳ್ಳೆಯ ಸ್ನೇಹಿತರಷ್ಟೇ’ ಎನ್ನುವ ದಿಶಾ, ಟೈಗರ್‌ ಮನವೊಲಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡಿ ವಿಫಲವಾಗಿದ್ದಾಳೆ.

ಜಿಮ್ನಾಸ್ಟಿಕ್, ಯೋಗ, ಫಿಟ್‌ನೆಸ್, ನೃತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಜ್ಜೆಯೂರಿ ಸಫಲಳಾಗಿರುವ ದಿಶಾ ಈಚೆಗಷ್ಟೇ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಳು. ದಿಶಾಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಕೆಯ ಗೆಳೆಯ ಟೈಗರ್ ಶ್ರಾಫ್ ಬರುತ್ತಿದ್ದಂತೆಯೇ ಪಾರ್ಟಿ ರಂಗೇರಿತ್ತು. 

ಡೇಟಿಂಗ್‌ನಲ್ಲಿದ್ದೂ ತಮ್ಮ ನಡುವೆ ಏನಿಲ್ಲವೆಂದೂ ಹೇಳಿಕೊಂಡಿದ್ದ ದಿಶಾಗೂ ಟೈಗರ್ ಹಾಜರಿ ಅಚ್ಚರಿ ಯುಂಟು ಮಾಡಿತಂತೆ. ಸ್ನೇಹಿತರು ಮತ್ತು ಅಭಿಮಾನಿಗಳ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡ ದಿಶಾ, ಟೈಗರ್ ಜೊತೆಗೆ ಕ್ಯಾಮೆರಾಗಳಿಗೂ ಫೋಸು ನೀಡಿ ಸುದ್ದಿಯಾದರು. 

 ‘ಟೈಗರ್ ಶ್ರಾಫ್ ತುಂಬಾ ಸ್ಲೋ. ಅವನೊಬ್ಬ ಒಳ್ಳೆಯ ಮಿತ್ರ. ಸ್ನೇಹ ಮೀರಿದ ಸಂಬಂಧ ನಮ್ಮದಾಗಬೇಕೆಂಬ ಆಸೆ ನನ್ನದು. ನನಗೆ ಗೊತ್ತಿರುವಂಥ ವಿದ್ಯೆಗಳನ್ನೆಲ್ಲಾ ಪ್ರಯೋಗಿಸಿದ್ದೇನೆ. ಆದರೂ ಅವನು ನನ್ನನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲ’ ಎಂದಿದ್ದ ದಿಶಾಗೆ ಟೈಗರ್‌ಗೆ ಮನಸೋತಿರಬಹುದು ಅನ್ನುವ ಲೆಕ್ಕಾಚಾರ ಈಗ ಬಾಲಿವುಡ್‌ನಲ್ಲಿ ಶುರುವಾಗಿದೆ. 

ಈಚೆಗಷ್ಟೇ ಸಲ್ಮಾನ್ ಖಾನ್ ಅಭಿನಯದ ‘ಭಾರತ್’ ಸಿನಿಮಾದಲ್ಲಿ ನಟಿಸಿದ್ದ ದಿಶಾ ಪಟಾನಿ, ವಯಸ್ಸಿನ ಅಂತರದ ಕಾರಣದಿಂದಾಗಿ ತಾನೆಂದೂ ಸಲ್ಮಾನ್ ಜೊತೆ ನಟಿಸುವುದಿಲ್ಲವೆಂದು ಹೇಳಿದ್ದು ಬಾಲಿವುಡ್‌ನಲ್ಲಿ ದೊಡ್ಡ ಸುದ್ದಿಯಾಗಿತ್ತು.

Post Comments (+)