ಹಿರಿಯ ಸಾಹಿತಿ ದೊಡ್ಡರಂಗೇಗೌಡ ಅವರ ನಿರ್ದೇಶನದ ಮೊದಲ ಚಿತ್ರ ‘ಹಾರುವ ಹಂಸಗಳು’ ನಮ್ಮ ಫ್ಲಿಕ್ಸ್ ಮೂಲಕ ಆಗಸ್ಟ್ 12ರಂದು ಬಿಡುಗಡೆಯಾಗಲಿದೆ.

ಚಿತ್ರ ಬಿಡುಗಡೆಯ ಕುರಿತು ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೊಡ್ಡರಂಗೇಗೌಡ ಅವರು, ‘ಒಂದು ದಿನ ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಚಿಕ್ಕಮಕ್ಕಳ ಕೈಯಲ್ಲಿ ಮೊಬೈಲ್ ಇದ್ದದ್ದನ್ನು ನೋಡಿ, ಇದರ ಉಪಯೋಗ, ದುರುಪಯೋಗದ ಬಗ್ಗೆ ಯೋಚಿಸಿದ್ದೆ. ಈ ಕುರಿತು ಸ್ನೇಹಿತರ ತಂಡದ ಮುಂದೆ ಹೇಳಿಕೊಂಡಾಗ, ಅವರೆಲ್ಲಾ ನೀವೇ ಈ ಬಗ್ಗೆ ಬರೆಯಿರಿ ಎಂದು ಸಲಹೆ ನೀಡಿದರು. ಹೀಗಾಗಿ ಒಂದು ನಾಟಕ ಬರೆದಿದ್ದೆ. ಈ ನಾಟಕ ನೋಡಿದ ನನ್ನ ಸ್ನೇಹಿತ ವಾಸುಪ್ರಸಾದ್ ಅವರು ಈ ನಾಟಕವನ್ನು ಚಲನಚಿತ್ರ ಮಾಡೋಣ ಎಂದರು. ಅಷ್ಟೇ ಅಲ್ಲದೇ, ನೀವೇ ನಿರ್ದೇಶನವನ್ನೂ ಮಾಡಬೇಕು ಎಂದರು. ಅವರೆಲ್ಲರ ಒತ್ತಾಯಕ್ಕೆ ಮಣಿದು ನಾನು ಎಪ್ಪತ್ತೈದನೇ ವಯಸ್ಸಿಗೆ ನಿರ್ದೇಶನಕ್ಕೆ ಮುಂದಾದೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಎರಡು ಹಾಡುಗಳನ್ನು ನಾನೇ ಬರೆದಿದ್ದಾನೆ. ದುಂಡಿರಾಜ್ ಅವರ ಒಂದು ಹಾಡನ್ನು ಸಹ ಈ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ’ ಎಂದರು.

ನಿರ್ಮಾಪಕ ವಾಸುಪ್ರಸಾದ್ ಅವರು, ‘ಚಿತ್ರ ಉತ್ತಮವಾಗಿ ಮೂಡಿಬಂದಿದೆ. ನಮ್ಮ ಫ್ಲಿಕ್ಸ್ನಲ್ಲಿ ಈಗಾಗಲೇ ಸಾವಿರ ಟಿಕೆಟ್ ಬುಕ್ ಆಗಿದೆ’ ಎಂದರು. ಚಿತ್ರದ ಒಂದು ಹಾಡಿಗೆ ಉಪಾಸನ ಮೋಹನ್ ಸಂಗೀತ ನೀಡಿದ್ದರೆ, ಉಳಿದ ಹಾಡುಗಳಿಗೆ ಶ್ರೀಸುರೇಶ್ ಸಂಗೀತ ನೀಡಿದ್ದಾರೆ. ಓಜಸ್ ದೀಪ್, ಚಿನ್ಮಯ್, ದೊಡ್ಡರಂಗೇಗೌಡ, ರೂಪ, ಪ್ರಣವ ಮೂರ್ತಿ, ಶಿವಾನಂದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.