ನಟ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಅವರು ನಟಿಸಿರುವ ಸಾಹೋ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆಗಸ್ಟ್ 30ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರತಂಡ ಒಂದರ ಹಿಂದೆ ಒಂದರಂತೆ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈಗ ಈ ಪೋಸ್ಟರ್‌ಗಳಿಂದಲೇ ‘ಸಾಹೋ’ ಚಿತ್ರ ವಿವಾದಕ್ಕೀಡಾಗಿದೆ.

ಈಚೆಗೆ ಸಾಹೋ ತಂಡವು ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಪರಸ್ಪರ ಅಪ್ಪಿಕೊಂಡಿರುವ ರೊಮ್ಯಾಂಟಿಕ್ ಪೋಸ್ಟರ್‌ವೊಂದನ್ನು ಹಂಚಿಕೊಂಡಿತ್ತು. ಆದರೆ ಆ ಪೋಸ್ಟರ್ 2016ರಲ್ಲಿ ರಣಬೀರ್ ಹಾಗೂ ಐಶ್ವರ್ಯಾ ರೈ ಬಚ್ಚನ್ ನಟಿಸಿದ ‘ಏ ದಿಲ್ ಹೇ ಮುಶ್ಕಿಲ್’ ಚಿತ್ರದ್ದು. ಅದನ್ನು ಯಥಾವತ್ತಾಗಿ ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಇದೊಂದೇ ಪೋಸ್ಟರ್ ಅಲ್ಲ, ಈ ಹಿಂದೆ ಬಿಡುಗಡೆ ಮಾಡಿರುವ ಆರೇಳು ಪೋಸ್ಟರ್‌ಗಳು ಹಾಲಿವುಡ್ ಚಿತ್ರಗಳ ಪೋಸ್ಟರ್‌ಗಳ ನಕಲು ಎಂದು ನೆಟಿಜನ್ನರು ಆರೋಪಿಸಿದ್ದಾರೆ.ಪ್ರಭಾಸ್ ಕನ್ನಡಕ ಧರಿಸಿರುವ ಪೋಸ್ಟರ್‌ವೊಂದು ಬಿಡುಗಡೆಯಾಗಿತ್ತು. ಅದು ಖ್ಯಾತ ಟೆಲಿವಿಜನ್ ಸರಣಿ ಚಿತ್ರ ಬ್ರೇಕಿಂಗ್ ಬ್ಯಾಡ್ ನಕಲು. ಹಾಗೇರೆಡಿ ಪ್ಲೇಯರ್ ಒನ್ಸ್, ರೈನ್‌ಬೋ ಸಿಕ್ಸ್ ಸೀಜ್ ಪೋಸ್ಟರ್‌ಗಳನ್ನು ಸಾಹೋ ಚಿತ್ರ ನಕಲು ಮಾಡಿದೆ ಎಂಬ ಸುದ್ದಿ ವೈರಲ್ ಆಗಿದೆ.‘ಚಿತ್ರತಂಡ ಸ್ಪೂರ್ತಿ ಎಂದು ಕರೆಯಬಹುದು’ ಎಂದು ಜನರು ಕಮೆಂಟ್ ಮಾಡಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದರೂ, ಚಿತ್ರತಂಡ ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.