ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bheema Teaser: ದುನಿಯಾ ವಿಜಯ್ ‘ಭೀಮ’ ಚಿತ್ರದ ಟೀಸರ್ ಬಿಡುಗಡೆ

ಜನವರಿ 20 ದುನಿಯಾ ವಿಜಯ್ ಜನ್ಮದಿನದ ಪ್ರಯುಕ್ತ ಇಂದು ಟೀಸರ್ ಬಿಡುಗಡೆಯಾಗಿದೆ
Published 19 ಜನವರಿ 2024, 13:15 IST
Last Updated 19 ಜನವರಿ 2024, 13:15 IST
ಅಕ್ಷರ ಗಾತ್ರ

ಬೆಂಗಳೂರು: ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸಿರುವ ‘ಭೀಮ’ (Bheema) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗಷ್ಟೇ ಕ್ಲೈಮ್ಯಾಕ್ಸ್‌ ದೃಶ್ಯಗಳ ಚಿತ್ರೀಕರಣ ಪೂರ್ಣಗೊಳಿಸಿದ್ದ ಚಿತ್ರತಂಡ, ಇಂದು (ಜ.19) ಸಂಜೆ ಟೀಸರ್‌ ಬಿಡುಗಡೆ ಮಾಡಿದೆ.

ಜನವರಿ 20 ದುನಿಯಾ ವಿಜಯ್ ಜನ್ಮದಿನದ ಪ್ರಯುಕ್ತ ಆನಂದ್ ಆಡಿಯೊ ಯುಟ್ಯೂಬ್ ಚಾನಲ್‌ನಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆದಿದೆ.

‘ಸಲಗ’ ಸಿನಿಮಾ ಮೂಲಕ ಡೈರೆಕ್ಟರ್‌ ಕ್ಯಾಪ್‌ ತೊಟ್ಟು ನಿರ್ದೇಶನದಲ್ಲೂ ಮಿಂಚಿದ್ದ ದುನಿಯಾ ವಿಜಯ್‌, ‘ಭೀಮ’ ಪ್ರಾಜೆಕ್ಟ್‌ ಆರಂಭಿಸಿ ಎರಡು ವರ್ಷ ಕಳೆದಿದೆ.

‘ಭೀಮ’ ಶೂಟಿಂಗ್‌ ಆರಂಭಿಸಿ, ಈ ನಡುವೆ ತೆಲುಗಿನ ವೀರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸಿ ಮರಳಿದ್ದ ವಿಜಯ್‌ ಚಿತ್ರೀಕರಣಕ್ಕೆ ವೇಗ ನೀಡಿದ್ದರು. ಇತ್ತೀಚೆಗೆ ಬೆಂಗಳೂರಿನ ವಿನೋಬನಗರದ ಗಲ್ಲಿಗಳಲ್ಲಿ ಮಧ್ಯರಾತ್ರಿ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯಗಳ ಚಿತ್ರೀಕರಣ ನಡೆದಿತ್ತು.

ಈಗಾಗಲೇ ಮೂರು ಹಾಡುಗಳನ್ನು ರಿಲೀಸ್ ಮಾಡಿರುವ ‘ಭೀಮ’ ಚಿತ್ರತಂಡ ಒಂದೆರಡು ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಚಿತ್ರದಲ್ಲಿ ಭೀಮನಿಗೆ ಜೋಡಿಯಾಗಿ ಅಶ್ವಿನಿ ನಟಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಕಲ್ಯಾಣಿ ಮತ್ತಿತರರು ಅಭಿನಯಿಸಿದ್ದಾರೆ.

ಮಾಸ್ತಿ ಸಂಭಾಷಣೆ ಚಿತ್ರಕ್ಕಿದ್ದು, ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT