ಈ ವಾರ ತೆರೆಗೆ ವಿಜಯಧ್ವಜ, ಮಜ್ಜಿಗೆ ಹುಳಿ

ಮಂಗಳವಾರ, ಜೂನ್ 18, 2019
24 °C

ಈ ವಾರ ತೆರೆಗೆ ವಿಜಯಧ್ವಜ, ಮಜ್ಜಿಗೆ ಹುಳಿ

Published:
Updated:
Prajavani

ಮಜ್ಜಿಗೆ ಹುಳಿ

ಎಸ್.ಎಲ್.ವಿ ಆರ್ಟ್ಸ್ ಲಾಂಛನದಲ್ಲಿ ಎಸ್.ರಾಮಚಂದ್ರ ಈ ಸಿನಿಮಾ ನಿರ್ಮಿಸಿದ್ದಾರೆ. ರಘುರಾಜ್ ಹಾಗೂ ಗಂಗಾಧರ್ ಈ ಚಿತ್ರದ ಸಹ ನಿರ್ಮಾಪಕರು. 

ರವೀಂದ್ರ ಕೊಟಕಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿ, ನಿರ್ದೇಶನ ಮಾಡಿದ್ದಾರೆ. ಎಂ.ಸಂಜೀವರಾವ್ ಸಂಗೀತ, ನರಸಿಂಹಮೂರ್ತಿ, ಶ್ಯಾಂಸುಂದರ್ ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ ಹಾಗೂ ಅರವಿಂದ್, ಹೈಟ್ ಮಂಜು, ಗಗಂ ರಾಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಇದೆ. ತಾರಾಬಳಗದಲ್ಲಿ ದೀಕ್ಷಿತ್ ವೆಂಕಟೇಶ್, ರೂಪಿಕಾ, ಸುಚೀಂದ್ರ ಪ್ರಸಾದ್, ಮೋಹನ್ ಜುನೇಜ, ರಮೇಶ್ ಭಟ್, ಮಿಮಿಕ್ರಿ ದಯಾನಂದ್, ತರಂಗ ವಿಶ್ವ, ಕೆಂಪೇಗೌಡ, ಕುರಿ ಸುನೀಲ್, ಮಲ್ಲೇಶ್, ಶಂಕರ್‌ನಾರಾಯಣ್ ಇದ್ದಾರೆ.

ವಿಜಯಧ್ವಜ

ದರ್ಶನ್ ನಿರ್ಮಾಣ ಮತ್ತು ಶ್ರೀನಾಥ್ ವಸಿಷ್ಠ ನಿರ್ದೇಶಿಸಿರುವ ಮಕ್ಕಳ ಸಿನಿಮಾ ಇದು. ಕಥೆ, ಚಿತ್ರಕಥೆ ಜೆ.ಎಂ. ಪ್ರಹ್ಲಾದ್ ಅವರದ್ದು. ಪವನ್ ಕುಮಾರ್ ಛಾಯಾಗ್ರಹಣ, ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ಶಾಲಾ ವಿದ್ಯಾರ್ಥಿಗಳಾಗಿ ತನ್ಮಯಿ ಎಸ್. ವಸಿಷ್ಠ, ಯೋಧ ವಿಜಯ ಭಾಸ್ಕರ್, ಮಾಸ್ಟರ್ ಲೋಕೇಶ್, ಮಾಸ್ಟರ್ ಭುವನ್, ಮಾಸ್ಟರ್ ರಕ್ಷನ್, ಉಪಾಧ್ಯಾಯರಾಗಿ ನಾಗೇಶ್ ಯಾದವ್, ಕಾರ್ಗಿಲ್ ಸೈನಿಕನಾಗಿ ಕ್ಯಾಪ್ಟನ್ ನವೀನ್ ನಾಗಪ್ಪ ಇದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !