ಗುರುವಾರ , ನವೆಂಬರ್ 21, 2019
22 °C

‘ತೂಫಾನ್‌’ ಶೂಟಿಂಗ್‌ನಲ್ಲಿ ಫರ್ಹಾನ್‌ಗೆ ಗಾಯ

Published:
Updated:
Prajavani

‘ತೂಫಾನ್‌’ ಸಿನಿಮಾದಲ್ಲಿ ಬಾಕ್ಸರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟ ಫರ್ಹಾನ್‌ ಅಖ್ತರ್‌, ಶೂಟಿಂಗ್‌ಗಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದಾರೆ.

‘ಬಲವಾಗಿ ಪಂಚ್‌ ಮಾಡುತ್ತಿದ್ದ ವೇಳೆ ಕೈ ಬೆರಳಿಗೆ ಏಟಾಗಿದೆ. ಎಕ್ಸರೇ ಯಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ. ಕ್ರೀಡಾಪಟು ಪಾತ್ರಕ್ಕೆ ನ್ಯಾಯಸಲ್ಲಿಸಬೇಕಾದರೆ ಇದೆಲ್ಲಾ ಮಾಮೂಲಿ, ಬೇಗನೆ ಗುಣಮುಖನಾಗಿ ಶೂಟಿಂಗ್‌ಗೆ ಮರಳಲಿದ್ದೇನೆ’ ಎಂದು ಫರ್ಹಾನ್‌ ಟ್ವೀಟ್ ಮಾಡಿದ್ದಾರೆ.

‘ಭಾಗ್‌ ಮಿಲ್ಕಾ ಭಾಗ್‌’ ಸಿನಿಮಾವನ್ನು ನಿರ್ದೇಶಿಸಿದ್ದ ರಾಕೇಶ್‌ ಓಂಪ್ರಕಾಶ್ ಮೆಹ್ರಾ ಅವರೇ ‘ತೂಫಾನ್‌’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 2020ರ ಆಗಸ್ಟ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

‘ನಾನು ಆರಂಭಿಕ ಹಂತದಿಂದಲೇ ಬಾಕ್ಸಿಂಗ್ ಕಲಿಯುತ್ತಿದ್ದೇನೆ. ಪ್ರತಿಯೊಂದು ಹಂತವನ್ನು ದಾಟಿದಾಗಲೂ ಫೋಟೊ ಅಪ್‌ಲೋಡ್ ಮಾಡಿದ್ದೇನೆ. ಅಭಿಮಾನಿಗಳು ಖುಷಿವ್ಯಕ್ತಪಡಿಸಿದ್ದಾರೆ’ ಎಂದು ಫರ್ಹಾನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಪ್ರತಿಕ್ರಿಯಿಸಿ (+)