ಶುಕ್ರವಾರ, ಡಿಸೆಂಬರ್ 6, 2019
20 °C

ಒಂದೇ ಸಿನಿಮಾದಲ್ಲಿ ಅಪ್ಪ–ಮಗ ಧಮಾಕಾ

Published:
Updated:
Prajavani

ತೆಲುಗು ಚಿತ್ರರಸಿಕರಿಗೆ ಮೆಗಾಸ್ಟಾರ್‌ ಚಿರಂಜೀವಿ ಈ ಡಿಸೆಂಬರ್‌ನಲ್ಲಿ ಡಬಲ್‌ ಧಮಾಕಾ ನೀಡಲಿದ್ದಾರೆ. ಡಿಸೆಂಬರ್‌ನಲ್ಲಿ ಸೆಟ್ಟೇರಲಿರುವ  ‘ಚಿರು152’ ಚಿತ್ರದಲ್ಲಿ ಚಿರಂಜೀವಿ ತಮ್ಮ ಪುತ್ರ ರಾಮ್‌ ಚರಣ್‌ ತೇಜ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. 

ಶ್ರೀಕಾಕುಳಂನ ನಕ್ಸಲೀಯನೊಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗುವ ಪಾತ್ರದಲ್ಲಿ ಚಿರು ನಟಿಸಲಿದ್ದಾರೆ. ಕೊರಟಾಳ ಶಿವ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ಯುವ ನಕ್ಸಲೈಟ್‌ ಪಾತ್ರದಲ್ಲಿ ಚಿರಂಜೀವಿ ನಟಿಸಬೇಕಾಗಿತ್ತು. ಆದರೆ, ಇದೀಗ ಆ ಪಾತ್ರವನ್ನು ಅವರ ಪುತ್ರ ರಾಮ್‌ ಚರಣ್‌ ನಿರ್ವಹಿಸಲಿದ್ದಾರೆ. ಚಿರಂಜೀವಿಗೆ ಎದುರು ನಾಯಕಿಯಾಗಿ ತಮಿಳು ನಟಿ ತ್ರಿಷಾ ನಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ರಾಮ್‌ ಚರಣ್‌ ಸಿನಿಮಾದಲ್ಲಿ ಪವನ್‌ ಕಲ್ಯಾಣ್‌ ನಟನೆ?

ಈ ಬದಲಾವಣೆ ಕೇಳಿ ತೆಲುಗು ಚಿತ್ರರಸಿಕರು ಫುಲ್‌ ಖುಷ್‌ ಆಗಿದ್ದಾರೆ. ಏಕಕಾಲಕ್ಕೆ ತಂದೆ ಮತ್ತು ಮಗನನ್ನು ಕಣ್ತುಂಬಿಕೊಳ್ಳಬಹುದಲ್ಲ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು