ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಿನ ಹೊತ್ತು ಬಣಗುಡುವ ಸಿನಿಮೋತ್ಸವ

Last Updated 27 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಗಂಟೆ 11 ಆದರೆ ಸಾಕು ಸಿನಿಮೋತ್ಸವದಲ್ಲಿ ಕ್ಯೂ ನಿಲ್ಲಲೂ ನೂಕು ನುಗ್ಗಲು ಶುರುವಾಗುತ್ತದೆ. ಆದರೆ ಬೆಳಗಿನ ಮೊದಲ ಅವಧಿಯ ಸಿನಿಮಾಗಳಿಗೆ ಸಿನಿಪ್ರಿಯರು ಅಷ್ಟೇನು ಆಸಕ್ತಿ ತೋರಿದಂತಿಲ್ಲ.

9.30ಗೆ ಮೊದಲ ಸಿನಿಮಾ ಆರಂಭವಾಗುತ್ತದೆ. ಅಷ್ಟು ಹೊತ್ತಿಗೆ ಒರಾಯನ್‌ಗೆ ತಲುಪಲು ಸಾಧ್ಯವಾಗದ ಬಹುತೇಕರು 9.45ರ ನಂತರದ ಸಿನಿಮಾಗಳನ್ನೇ ಆಯ್ಕೆಮಾಡಿಕೊಳ್ಳುತ್ತಾರೆ.

10.15ರ ನಂತರ ಆರಂಭವಾಗುವ ಸಿನಿಮಾಗಳಿಗೆ ಮತ್ತೆ ಕ್ಯೂ ನಿತ್ತೇ ಹೋಗಬೇಕಾಗುತ್ತದೆ.ಕೆಲವರು 9.30 ಸಿನಿಮಾಕ್ಕೆ ಬಂದರೂ ಆ ಸಿನಿಮಾಗಳು ಇಷ್ಟವಾಗದೇ 10 ಗಂಟೆಗೆ ಮತ್ತೆ ಇನ್ನೊಂದು ಸ್ಕ್ರೀನ್‌ಗೆ ಹೋಗಿ ಸಿನಿಮಾ ನೋಡಿದ್ದಾರೆ. ಮೊದಲ ಅವಧಿಯಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಪ್ರಸಾರ ಮಾಡದೇ ಇರುವುದು ಕೂಡ ಅದಕ್ಕೆ ಕಾರಣವಾಗಿದೆ.

‘ಬೆಳಗಿನ ಕೆಲಸಗಳನ್ನು ಮುಗಿಸಿ ಹೊರಟರೂ 9.30ಕ್ಕೆ ತಲುಪಲು ಆಗುತ್ತಿಲ್ಲ. ಟ್ರಾಫಿಕ್‌ ಸಮಸ್ಯೆ ಒಂದು ಕಾರಣ. ಮೆಟ್ರೊ ಹತ್ತಿದರೂ ಎರಡು ಟ್ರೈನ್ ಬದಲಿಸಿ ಹೋಗಬೇಕು. ಆದ್ದರಿಂದ ಮೊದಲ ಅವಧಿಯ ಸಿನಿಮಾಕ್ಕೆ ಹೋಗುತ್ತಿಲ್ಲ’ ಎನ್ನುವುದು ಗೃಹಿಣಿ ಲತಾ ಅವರ ಮಾತು.

‘ಇಲ್ಲಿಯವರೆಗೂ 9.30ಕ್ಕೆ ಇದ್ದ ಯಾವ ಸಿನಿಮಾಗಳೂ ಇಷ್ಟ ಆಗಲಿಲ್ಲ. ಅಲ್ಲದೇ 10.15ಕ್ಕೆ ಬರುವುದು ಸುಲಭ. ಆದ್ದರಿಂದ ಆ ನಂತರದ ಅವಧಿಯ ಸಿನಿಮಾಗಳಲ್ಲೇ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಿಕೊಂಡೆ‘ ಎಂದು ಹೇಳಿದರು ವಿದ್ಯಾರ್ಥಿನಿ ಸರಳಾ.

‘ಬುಧವಾರ ಬೆಳಿಗ್ಗೆ 9.40ಕ್ಕೆ ‘ಸಿಬೆಲ್‌’ ಸಿನಿಮಾ ಇತ್ತು. ಸ್ನೇಹಿತರು ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದರು. ಆದ್ದರಿಂದ ಮೆಟ್ರೊ ರೈಲಿನಿಂದ ಇಳಿದ ಕೂಡಲೇ ಓಡಿಕೊಂಡೇ ಒರಾಯನ್‌ ಮಾಲ್ ತಲುಪಿದೆ. ಈ ಅವಧಿಯಲ್ಲೂ ಅಪರೂಪಕ್ಕೆ ಕ್ಯೂ ಇತ್ತು. ಸಿನಿಮಾ ಸಿಗೋದು ಅನುಮಾನ ಎನಿಸಿ ಭಯ ಆಯಿತು. ಆದರೆ ಅಷ್ಟು ಜನರಿಗೆ ದೊಡ್ಡ ಹಾಲ್‌ ತುಂಬಲೇ ಇಲ್ಲ. ಆ ನಂತರ ಬಂದವರಿಗೂ ಸಿನಿಮಾ ನೋಡಲು ಸಿಕ್ಕಿತು. ಅದೇ ಮಧ್ಯಾಹ್ನದ ಅವಧಿ ಆಗಿದ್ದರೆ ಈ ಸಿನಿಮಾ ನಮಗೆ ಸಿಗುತ್ತಿರಲಿಲ್ಲ‘ ಎಂದಿದ್ದು ಕವಯಿತ್ರಿ ಅನನ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT