ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೆವ್ವ’ದೊಂದಿಗೆ ಪ್ರಥಮ್‌ ಫಸ್ಟ್‌ನೈಟ್‌!

Published 1 ಮಾರ್ಚ್ 2024, 0:23 IST
Last Updated 1 ಮಾರ್ಚ್ 2024, 0:23 IST
ಅಕ್ಷರ ಗಾತ್ರ

‘ಬಿಗ್ ಬಾಸ್’ ಖ್ಯಾತಿಯ ನಟ ಪ್ರಥಮ್ ನಾಯಕನಾಗಿ ಅಭಿನಯಿಸಿರುವ ‘ಫಸ್ಟ್‌ನೈಟ್ ವಿತ್ ದೆವ್ವ’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪಿ.ವಿ.ಆರ್ ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನದ ಚಿತ್ರಕ್ಕೆ ನವೀನ್ ಬೀರಪ್ಪ ಬಂಡವಾಳ ಹೂಡಿದ್ದಾರೆ.

‘ಚಿತ್ರದಲ್ಲಿ ಮೊದಲು ಬರುವ ಸನ್ನಿವೇಶವೇ ಮದುವೆ ದೃಶ್ಯ. ಮದುವೆಯನ್ನು ಬಹಳ ಆಸೆಯಿಂದ ಆದ ಹುಡುಗನಿಗೆ ತನ್ನ ಮೊದಲರಾತ್ರಿ ನಡೆಯುತ್ತಿರುವುದು ದೆವ್ವದ ಜೊತೆಗೆ ಎಂದು ತಿಳಿದಾಗ ಏನೆಲ್ಲಾ ಆಗುತ್ತದೆ? ಎಂಬುದು ಚಿತ್ರದ ಕಥಾಸಾರಾಂಶ. ಈ ಚಿತ್ರದಲ್ಲಿ ನಗುವಿಗೆ ಬರವಿಲ್ಲ. ಹಾರಾರ್, ಕಾಮಿಡಿ, ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ಗಳ ಸಮ್ಮಿಲನ ಈ ಚಿತ್ರ’ ಎಂದರು ಪ್ರಥಮ್‌.

ನಿಖಿತ, ಜೀವಿತ ಹಾಗೂ ಸುಶ್ಮಿತ ಮೂವರು ನಾಯಕಿಯರು. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ರಮೇಶ್ ಭಟ್, ಹರೀಶ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT