ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ತೆರೆಗೆ

Last Updated 10 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಎಲ್ಲಿದ್ದೆ ಇಲ್ಲಿ ತನಕ

ಲೋಕೇಶ್‌ ಪ್ರೊಡಕ್ಷನ್ಸ್‌ ಲಾಂಛನದಡಿ ಸೃಜನ್‌ ಲೋಕೇಶ್‌ ನಿರ್ಮಿಸಿರುವ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರ ಬಿಡುಗಡೆಯಾಗುತ್ತಿದೆ.

ಅರುಣ್ ರಾಮದಾಸ್ ಕಥೆ ಬರೆದಿದ್ದಾರೆ. ತೇಜಸ್ವಿ ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗಣೇಶ್ ಮಲ್ಲಯ್ಯ ಅವರ ಸಂಕಲನವಿದೆ. ಥ್ರಿಲ್ಲರ್ ಮಂಜು ಮತ್ತು ವಿನೋದ್ ಸಾಹಸ ನಿರ್ದೇಶಿಸಿದ್ದಾರೆ. ಮದನ್ -ಹರಿಣಿ, ಮುರಳಿ, ಕಲೈ ನೃತ್ಯ ನಿರ್ದೇಶಿಸಿದ್ದಾರೆ. ಮೋಹನ್ ಬಿ. ಕೆರೆ ಅವರ ಕಲಾ ನಿರ್ದೇಶನವಿದೆ. ಬೆಂಗಳೂರು, ಕಾಶ್ಮೀರ ಹಾಗೂ ಮಲೇಷ್ಯಾದಲ್ಲಿ ಶೂಟಿಂಗ್‌ ನಡೆಸಲಾಗಿದೆ.

ಸೃಜನ್ ಲೋಕೇಶ್ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಹರಿಪ್ರಿಯಾ ನಾಯಕಿ. ಗಿರಿಜಾ ಲೋಕೇಶ್, ಸಾಧುಕೋಕಿಲ, ತಾರಾ, ಅವಿನಾಶ್,ತಬಲ ನಾಣಿ, ಯಶಸ್ ಸೂರ್ಯ, ರಾಧಿಕಾ ರಾವ್, ಗಿರಿ, ಎಂ.ಎಸ್. ಉಮೇಶ್, ಸಿಹಿಕಹಿ ಚಂದ್ರು, ರಂಗ ವಿಶ್ವ ತಾರಾಗಣದಲ್ಲಿದ್ದಾರೆ.

ಜ್ಞಾನಂ

ವಸಂತ ಸಿನಿ ಕ್ರಿಯೇಷನ್ಸ್‌ ಲಾಂಛನದಡಿ ಸಿ. ವೇಣು ಭಾರದ್ವಾಜ್ ಹಾಗೂ ಸಿ. ರಾಜ್ ಭಾರದ್ವಾಜ್‌ ನಿರ್ಮಿಸಿರುವ ‘ಜ್ಞಾನಂ’ ಸಿನಿಮಾ ಬಿಡುಗಡೆಯಾಗುತ್ತಿದೆ.

ವರದರಾಜ್ ವೆಂಕಟಸ್ವಾಮಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ರೋಹಿತ್ ಸೋವರ್ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ದಯಾಳನ್ ಅವರ ಛಾಯಾಗ್ರಹಣವಿದೆ.

ವರದರಾಜ ವೆಂಕಟಸ್ವಾಮಿ ಅವರ ಸಂಕಲನವಿದೆ. ಶೈಲಶ್ರೀ ಸುದರ್ಶನ್, ಪ್ರಣಯಮೂರ್ತಿ, ಮಾಸ್ಟರ್ ಲೋಹಿತ್, ಮಾಸ್ಟರ್ ಧ್ಯಾನ್, ವೇಣು ಭಾರದ್ವಾಜ್, ಸಂತೋಷ್ ಕುಮಾರ್, ರಾಧಿಕಾ ಶೆಟ್ಟಿ, ಆಶಾ ಸುಜಯ್, ಅನಿಲ್ ಕುಮಾರ್ ತಾರಾಗಣದಲ್ಲಿದ್ದಾರೆ.

ಲುಂಗಿ

ಖಾರ ಎಂಟರ್‌ಟೈನ್‌ಮೆಂಟ್‌ನಡಿ ಮುಖೇಶ್ ಹೆಗಡೆ ನಿರ್ಮಾಣದ ‘ಲುಂಗಿ’ ಸಿನಿಮಾ ತೆರೆ ಕಾಣುತ್ತಿದೆ. ಪ್ರಣವ್ ಹೆಗಡೆ ಇದರ ನಾಯಕ. ಅರ್ಜುನ್ ಲೂಯಿಸ್ ಹಾಗೂ ಅಕ್ಷಿತ್ ಶೆಟ್ಟಿ ಈ ಚಿತ್ರ ನಿರ್ದೇಶಿಸಿದ್ದಾರೆ. ಅಹಲ್ಯಾ ಸುರೇಶ್, ರಾಧಿಕಾ ರಾವ್, ವಿ. ಮನೋಹರ್, ದೀಪಕ್ ರೈ, ರೂಪಾ ವರಕಡಿ, ಜಯಶೀಲ, ವಿ.ಜೆ. ವಿನೀತ್, ಪ್ರಕಾಶ್‌ ತುಮ್ಮಿನಾಡು, ಜಯಕೃಷ್ಣನ್, ಕಾರ್ತಿಕ್, ಸಂದೀಪ್ ಶೆಟ್ಟಿ, ಜಯರಾಂ ಆಚಾರ್ಯ, ಮೈಮ್ ರಾಮದಾಸ್, ಚೇತನ್ ರೈ ಮಣಿ ತಾರಾಗಣದಲ್ಲಿದ್ದಾರೆ.

ರಿಜ್ಜೋ ಪಿ. ಜಾನ್ ಅವರ ಛಾಯಾಗ್ರಹಣವಿದೆ. ಪ್ರಸಾದ್ ಕೆ. ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಮನು ಶೇಡ್ಗರ್ ಅವರ ಸಂಕಲನವಿದೆ. ಮಹೇಶ್ ಎನ್ಮೂರು ಅವರ ಕಲಾ ನಿರ್ದೇಶನವಿದೆ. ಹೈಟ್ ಮಂಜು, ವಿನಾಯಕ ಆಚಾರ್ಯ, ಚೇತನ್ ಕುಲರ್ ಹಾಗೂ ಅಸ್ಖಿಟ್ ಶೆಟ್ಟಿ ಅವರ ನೃತ್ಯ ನಿರ್ದೇಶನವಿದೆ.

ದೇವರು ಬೇಕಾಗಿದ್ದಾರೆ

ಹೊರೈಜಾನ್ ಮೂವೀಸ್‌ನಡಿ ‘ದೇವರು ಬೇಕಾಗಿದ್ದಾರೆ’ ಸಿನಿಮಾ ಬಿಡುಗಡೆಯಾಗುತ್ತಿದೆ.

ಮುಗ್ಧ ಮಗುವೊಂದು ದೇವರನ್ನು ಹುಡುಕಿಕೊಂಡು ಹೋಗುವಾಗ ದಾರಿಯಲ್ಲಿ ಕಂಡುಬರುವ ವಿಚಾರಗಳೇ ಈ ಚಿತ್ರದ ಕಥಾಹಂದರ.ಕೆಂಜ ಚೇತನ್ ಕುಮಾರ್ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

8 ವರ್ಷದ ಬಾಲಕನಾಗಿ ಮಾಸ್ಟರ್ ಅನೂಪ್ ಜೊತೆಗೆ 80 ವರ್ಷದ ಶಿವರಾಮಣ್ಣ ಅಭಿನಯಿಸಿದ್ದಾರೆ. ಪ್ರಸಾದ್ ವಸಿಷ್ಠ, ಸತ್ಯನಾಥ್, ಶಾರದಾ ತಾರಾಗಣದಲ್ಲಿದ್ದಾರೆ.

ಪ್ರಸಾದ್ ವಸಿಷ್ಠ ಹಾಗೂ ದಿಲೀಪ್ ರಾಣಾಸಹ ನಿರ್ಮಾಪಕರಾಗಿದ್ದಾರೆ. ಜುಯೆವಿನ್ ಸಂಗೀತ ಸಂಯೋಜಿಸಿದ್ದಾರೆ. ರುದ್ರಮುನಿ ಅವರ ಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT