ಸೋಮವಾರ, ಸೆಪ್ಟೆಂಬರ್ 23, 2019
24 °C

ಗೀತಾ ಚಿತ್ರದ ಹಾಡು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಣೆ

Published:
Updated:
Prajavani

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಗೀತಾ ಚಿತ್ರದ “ಕನ್ನಡ ಕನ್ನಡ ಕನ್ನಡವೇ ಸತ್ಯ” ಕನ್ನಡ ಜಾಗೃತಿ ಹಾಗೂ ಹೋರಾಟದ ಹಾಡನ್ನು ಚಿತ್ರ ತಂಡವು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಿಸಿದೆ.

ಈ ಹಾಡನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿದ್ದು, ಪವರ್‌ ಸ್ಟಾರ್‌ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಪುನೀತ್‌ ರಾಜ್‌ಕುಮಾರ್‌ಗೆ ವಿಶೇಷ ಧನ್ಯವಾದಗಳನ್ನೂ ಹೇಳಿರುವ ನಟ ಗಣೇಶ್‌, ಈ ಹಾಡನ್ನು ಸಮಸ್ತ ಕನ್ನಡ ಜನತೆಗೆ ಮತ್ತು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಈ ಸಿನಿಮಾ ಮೂಲಕ ಮೊದಲ ಬಾರಿಗೆ ಗೋಕಾಕ್‌ ಚಳವಳಿಯ ನೆನಪುಗಳನ್ನು ತೆರೆಯ ಮೇಲೆ ತರಲಾಗುತ್ತಿದೆ. ಡೈಲಾಗ್‌ನಿಂದ ಹಿಡಿದು ಎಲ್ಲವೂ ಹೊಸದು. ಇದು ನನ್ನ ಪ್ರಾಡೆಕ್ಟ್‌. ಅದಕ್ಕೆ ಏನು ಬೇಕೋ ಅಷ್ಟು ಶ್ರಮ ಹಾಕಿರುವೆ. ಅದರ ಬಗ್ಗೆ ನನಗೆ ತೃಪ್ತಿಯೂ ಇದೆ ಎಂದು ಗಣೇಶ್‌ ಈ ಹಿಂದೆ ಸಂದರ್ಶನದಲ್ಲೂ ಹೇಳಿಕೊಂಡಿದ್ದರು..

 

Post Comments (+)