‘ನನಗೆ ಹುಡ್‌ಗೀರು ಅಂದ್ರೆ ಇಷ್ಟ ಇಲ್ಲ. ಐ ಹೇಟ್ ಗರ್ಲ್ಸ್’...

ಹೀಗೊಂದು ಡೈಲಾಗ್ ನಟ ಗಣೇಶ್ ಅವರ ಬಾಯಿಂದ ಬಂದರೆ ಪ್ರೇಕ್ಷಕರಿಗೇ ಒಂದು ಕ್ಷಣ ಆಶ್ಚರ್ಯವಾಗಬಹುದು. ಇಂತಹ ವಿಭಿನ್ನವಾದ ಕಥಾಹಂದರ ಹೊಂದಿರುವ ಕಾಮಿಡಿ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ ‘ತ್ರಿಬಲ್ ರೈಡಿಂಗ್’. ಮಹೇಶ್ ಗೌಡ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಶುಕ್ರವಾರ ಪೂರ್ಣಗೊಂಡಿದ್ದು, ‘ಇದೊಂದು ಸಂಪೂರ್ಣ ಮನರಂಜನೆಯ’ ಚಿತ್ರ ಎಂದಿದ್ದಾರೆ ಗಣೇಶ್.

ಗಣೇಶ್ ಜನ್ಮದಿನದಂದು(ಜು.2) ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಗಣೇಶ್ ಹಾಗೂ ಸಾಧುಕೋಕಿಲ ಜೋಡಿ ಟೀಸರ್‌ನಲ್ಲೇ ಹಾಸ್ಯದ ಕಚಗುಳಿಯನ್ನು ಇಟ್ಟಿತ್ತು. ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ–2’, ಸುನಿ ನಿರ್ದೇಶನದ ‘ಸಖತ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದ ಗಣೇಶ್ ‘ತ್ರಿಬಲ್ ರೈಡಿಂಗ್’ಗೆ ಹೊರಟಿದ್ದರು. ಈ ಚಿತ್ರದ ಮೂಲಕ ಕಿರುತೆರೆ ನಟಿ ಮೇಘ ಶೆಟ್ಟಿ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸುತ್ತಿದ್ದು, ಅದಿತಿ ಪ್ರಭುದೇವ ಹಾಗೂ ರಚನಾ ಇಂದರ್ ಕೂಡಾ ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.