ಶುಕ್ರವಾರ, ಡಿಸೆಂಬರ್ 6, 2019
17 °C

ಆನಂದದ 'ಹಗಲುಗನಸು'

Published:
Updated:
Prajavani

ಅಮೃತವರ್ಷಿಣಿ,ಹಾಲಿವುಡ್, ಅಭಿ ಮುಂತಾದ ಯಶಸ್ವಿ ಸಿನಿಮಾಗಳನ್ನು ನೀಡಿದ ನಿರ್ದೇಶಕ ದಿನೇಶ್ ಬಾಬು ಅವರ ನಿರ್ದೇಶನದ ‘ಹಗಲುಗನಸು’ ಚಿತ್ರ ಇದೇ 6ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.

ಈ ಸುದ್ದಿ ಹಂಚಿಕೊಳ್ಳಲು ನಿರ್ದೇಶಕರು ಚಿತ್ರ ತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

ಮಾಸ್ಟರ್‌ ಆನಂದ್‌ ಮತ್ತು ಸನಿಹಾ ಯಾದವ್‌ ನಾಯಕ–ನಾಯಕಿಯಾಗಿ ನಟಿಸಿದ್ದು, ಇದೊಂದು ಪಕ್ಕಾ ಮಾಸ್‌ ಎಂಟರ್‌ಟೈನ್‌ಮೆಂಟ್ ಚಿತ್ರ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುವುದು ಖಚಿತ ಎಂದು ದಿನೇಶ್‌ ಬಾಬು ಖಷಿಯಿಂದ ಮಾತು ಆರಂಭಿಸಿದರು. ನಿರ್ದೇಶನದ ಜತೆಗೆ ಛಾಯಾಗ್ರಹಣ, ಸಂಭಾಷಣೆಯ ಜವಾಬ್ದಾರಿಯನ್ನೂ ನಿರ್ವಹಿಸಿರುವುದಾಗಿ ತಿಳಿಸಿದರು.

ನಾಲ್ಕು ದಿನಗಳಲ್ಲಿ ಒಂದು ಮನೆಯಲ್ಲಿ ನಡೆಯುವ ಕಥೆಯೇ ಚಿತ್ರದ ಜೀವಾಳ. ಚಿತ್ರದ ನಾಯಕನಿಗೆ ಹೆಚ್ಚು ಹಗಲುಗನಸು ಬೀಳುತ್ತವೆ. ಆ ಹಗಲುಗನಸುಗಳ ಸುತ್ತವೇ ಕಥೆ ಹೆಣೆಯಲಾಗಿದೆ. ನಾಯಕನ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುವ, ಮಿಂಚುವ ಪಾತ್ರದಲ್ಲಿ ನಾಯಕಿಯಾಗಿ ಸನಿಹಾ ಯಾದವ್‌ ನಟಿಸಿದ್ದಾರೆ.

ಆನಂದ್‌ ಜತೆಗೆ ಅಶ್ವಿನ್ ಹಾಸನ್ ಮತ್ತು ನೀನಾಸಂ ಅಶ್ವತ್ಥ್ ಕೂಡ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಅಶ್ವತ್ಥ್‌ಗೆ ಜತೆಯಾಗಿ ವಾಣಿಶ್ರೀ ಕಾಣಿಸಿಕೊಂಡಿದ್ದಾರೆ.

ಹಿರಿಯ ನಟ ಮನ್‌ದೀಪ್‌ ರಾಯ್ ಅವರದ್ದು. ಈ ಚಿತ್ರದಲ್ಲಿ ದೆವ್ವದ ಪಾತ್ರ. ಹಾಗಂಥ ಇದು ಹಾರಾರ್‌ ಸಿನಿಮಾವಲ್ಲ ಎನ್ನುವ ಸ್ಪಷ್ಟನೆಯನ್ನು ನಿರ್ದೇಶಕರು ಆರಂಭದಲ್ಲೇ ನೀಡಿದ್ದರು. ಮನ್‌ದೀಪ್‌ ಅವರದ್ದು ಒಳ್ಳೆಯ ದೆವ್ವದ ಪಾತ್ರವಂತೆ. ಮನೆಯ ವರಾಂಡಾದಲ್ಲಿಯೇ ಕುಳಿತು, ಎಲ್ಲರ ಚಟುವಟಿಕೆಗಳನ್ನೂ ಅವಲೋಕಿಸುವ, ಎಲ್ಲರನ್ನೂ ನಕ್ಕು ನಗಿಸುವ ಕಾಮಿಡಿ ದೆವ್ವವಂಥೆ!

ಚಿತ್ರಕ್ಕೆ ಪದ್ಮನಾಭ ಮತ್ತು ಅಚ್ಯುತ್ ರಾಜ್ ಬಂಡವಾಳ ಹೂಡಿದ್ದಾರೆ. ಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು