ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣ ಸ್ನೇಹಿತೆಯ ಗಂಡನ ಜೊತೆ ಮದುವೆಯಾದರೇ ಹನ್ಸಿಕಾ? ಆರೋಪಕ್ಕೆ ನಟಿ ತಿರುಗೇಟು

Last Updated 25 ಫೆಬ್ರುವರಿ 2023, 14:21 IST
ಅಕ್ಷರ ಗಾತ್ರ

ಬೆಂಗಳೂರು: ನಟ–ನಟಿಯರಿಗೆ ಅವರ ಜೀವನದಲ್ಲಿ ಗಾಸಿಪ್‌ಗಳು, ವದಂತಿಗಳು ಹಾಗೂ ಕೆಲವರಿಂದ ತುಚ್ಚ ಮಾತುಗಳು ಸಾಮಾನ್ಯ. ಅದರಲ್ಲೂ ನಟಿಯರ ವಿಷಯದಲ್ಲಿ ಇದು ಒಂದು ಹೆಜ್ಜೆ ಮುಂದೆ.

ಬಾಲನಟಿಯಾಗಿದ್ದಾಗಲೇ ಗಮನ ಸೆಳೆದು ಇದೀಗ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಹನ್ಸಿಕಾ ಮೊಟ್ವಾನಿಗೂ ಇದೇ ರೀತಿ ಪ್ರಸಂಗ ಎದುರಾಗಿತ್ತು. ಈ ಬಗ್ಗೆ ಸ್ವತಃ ಅವರು ಇತ್ತೀಚೆಗೆ ಮೌನ ಮುರಿದು ಮಾತನಾಡಿದ್ದಾರೆ.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ಬರೋಬ್ಬರಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಇಂದಿಗೂ ಬೇಡಿಕೆ ನಟಿಯಾಗಿರುವ ಹನ್ಸಿಕಾ 2022ರ ಡಿಸೆಂಬರ್‌ನಲ್ಲಿ ಉದ್ಯಮಿ ಸೋಹೆಲ್ ಕಟಾರಿಯಾ ಅವರನ್ನು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ಸೋಹೆಲ್ ಅವರನ್ನು ವರಿಸುವ ಸಮಯದಲ್ಲೂ ಕೂಡ ಹನ್ಸಿಕಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಸೋಹೆಲ್ ಮೊದಲ ಮದುವೆಯಲ್ಲಿ ಹನ್ಸಿಕಾ ಬಾಲಕಿಯಾಗಿ ಹಾಜರಿದ್ದಳು. ತನ್ನ ಗೆಳತಿಯ ಗಂಡನನ್ನೇ ಮದುವೆಯಾಗಿದ್ದಾರೆ ಎಂದು ಚಿತ್ರಗಳನ್ನು ಹಂಚಿಕೊಳ್ಳಲಾಗಿತ್ತು.

ಈ ಬಗ್ಗೆ ಎನ್‌ಡಿಟಿವಿ ಗುಡ್‌ಟೈಮ್ಸ್‌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಇದೆಲ್ಲ ಮಾಧ್ಯಮಗಳ ಹಾಗೂ ಸೋಶಿಯಲ್ ಮೀಡಿಯಾಗಳ ಸೃಷ್ಟಿ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅಸಲಿಗೆ ಸೋಹೆಲ್ ನನ್ನ ಅಣ್ಣನ ಸ್ನೇಹಿತರಾಗಿದ್ದರು. ಸೋಹೆಲ್ ಜೊತೆ ಡೇಟಿಂಗ್ ನಡೆಸುತ್ತಿದ್ದ ನಂತರ ನಾವು ಪರಸ್ಪರ ಏನು ಎನ್ನುವುದನ್ನು ಕಂಡುಕೊಂಡೆವು. ನಾವು ಸಿನಿಮಾದವರು ಆಗಿರುವುದರಿಂದ ಇದೆಲ್ಲ ಮಾಮುಲು. ಆದರೂ ಕೆಲ ಸಲ ಇದೆಲ್ಲ ಕೇಳಿಸಿಕೊಂಡ ನಂತರ ಬೇಸರ ಆಗುತ್ತದೆ’ ಎಂದು ಹೇಳಿದ್ದಾರೆ.

ಹೃತಿಕ್ ರೋಶನ್ ಅವರ ಕೊಯಿ ಮಿಲ್ ಗಯಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಹನ್ಸಿಕಾ, ತೆಲುಗಿನ ‘ದೇಶಮುದುರು’ ಚಿತ್ರದ ಭರ್ಜರಿ ಓಪನಿಂಗ್ ನಂತರ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದರು. ಇದೀಗ ತಮಿಳು ಹಾಗೂ ಹಿಂದಿಯಲ್ಲಿ ಅವರ 5 ಚಿತ್ರಗಳು ಬಿಡುಗಡೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT