ಶುಕ್ರವಾರ, ನವೆಂಬರ್ 15, 2019
22 °C
ಮುತ್ತಿನ ಹಾರ, ಸಾಂಗ್ಲಿಯಾನ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು

ಸಿನಿಮಾ ನಿರ್ದೇಶಕ ಹ.ಸೂ. ರಾಜಶೇಖರ್‌ ನಿಧನ

Published:
Updated:

ಬೆಂಗಳೂರು: ‘ಕರ್ಫ್ಯೂ’ ಚಿತ್ರದ ನಿರ್ದೇಶಕ ಹ.ಸೂ. ರಾಜಶೇಖರ್‌(69) ಶನಿವಾರ ನಿಧನರಾದರು.

ಮೃತರಿಗೆ ಇಬ್ಬರು ಪುತ್ರರು ಇದ್ದಾರೆ. ‘ಸಾಂಗ್ಲಿಯಾನ’, ‘ಮುತ್ತಿನಹಾರ’ ಸಿನಿಮಾಗಳಿಗೆ ಅವರು ಸಹಾಯಕ ನಿರ್ದೇಶಕರಾಗಿ ದುಡಿದಿದ್ದರು. ಅವರು ನಿರ್ದೇಶಿಸಿದ ಮೊದಲ ಚಿತ್ರ ‘ಗಂಧರ್ವ’. ಬಳಿಕ ‘ನಿರ್ಬಂಧ’, ‘ಧೈರ್ಯ’, ‘ಮಿಸ್ಟರ್‌ ಎಕ್ಸ್’, ‘ಗರುಡ’, ‘ಪಾಪಿಗಳ ಲೋಕದಲ್ಲಿ’, ‘ಶಿವರಂಜನಿ’, ‘ಬಣ್ಣದ ಹೆಜ್ಜೆ’, ‘ಭೈರವಿ’ ಸೇರಿದಂತೆ 35 ಕನ್ನಡ ಮತ್ತು 3 ತುಳು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಅಂತ್ಯಕ್ರಿಯೆಯು ಭಾನುವಾರ  ಮಧ್ಯಾಹ್ನ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)