ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೀರೊ’ ಟೈಟಲ್‌ಗೆ ನಿರ್ಮಾಪಕರ ಕಿತ್ತಾಟ

Last Updated 9 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ವಿಜಯ್‌ ದೇವರಕೊಂಡ ಹಾಗೂ ಶಿವ ಕಾರ್ತಿಕೇಯನ್‌ ಇಬ್ಬರೂ ನಟರ ಮುಂದಿನ ಚಿತ್ರಗಳ ಟೈಟಲ್‌ ‘ಹೀರೊ’. ಈಗ ಸಿನಿಮಾದ ಈ ಟೈಟಲೇ ವಿವಾದಕ್ಕೀಡಾಗಿದ್ದು, ಆ ಟೈಟಲ್‌ಗೆ ಹಗ್ಗಜಗ್ಗಾಟ ನಡೆದಿದೆ.

ಪಿ.ಎಸ್‌. ಮಿತ್ರನ್‌ ಅವರ ಹೊಸ ಚಿತ್ರದಲ್ಲಿ ಶಿವ ಕಾರ್ತಿಕೇಯನ್‌ ನಾಯಕನಾಗಿ ನಟಿಸುತ್ತಿದ್ದು, ಇನ್ನೊಂದೆಡೆ, ವಿಜಯ್‌ ದೇವರಕೊಂಡ ಆನಂದ್‌ ಅಣ್ಣಾಮಲೈ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರಗಳ ಟೈಟಲ್‌ ‘ಹೀರೊ’. ಹಾಗಾಗಿ ಎರಡೂ ಚಿತ್ರಗಳ ನಿರ್ಮಾಪಕರು ಚಿತ್ರದ ಟೈಟಲ್‌ ಹಕ್ಕು ಪಡೆಯಲು ಹೋರಾಡುತ್ತಿದ್ದಾರೆ.

ವಿಜಯ್‌ ದೇವರಕೊಂಡ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಟ್ರೈಬಲ್‌ ಆರ್ಟ್ಸ್‌. ಶಿವ ಕಾರ್ತಿಕೇಯನ್‌ ಚಿತ್ರಕ್ಕೆ ಬಂಡವಾಳ ಹಾಕಿರುವುದು ಕೆಜೆಆರ್‌ ಸ್ಟುಡಿಯೋಸ್‌.2017ರಲ್ಲಿಯೇ ‘ಹೀರೊ’ ಟೈಟಲ್‌ನ್ನು ರಿಜಿಸ್ಟರ್‌ ಮಾಡಿಸಿದ್ದು, ಅದನ್ನು ಪ್ರತಿವರ್ಷ ನವೀಕರಿಸಿದ್ದಾಗಿ ಟ್ರೈಬಲ್ ಆರ್ಟ್ಸ್‌ ಹೇಳಿಕೊಂಡಿದೆ. ಶಿವ ಕಾರ್ತಿಕೇಯನ್‌ ಚಿತ್ರಕ್ಕೆ ಈ ಶೀರ್ಷಿಕೆ ಬಳಸದಂತೆ ಕೆಜೆಆರ್‌ ಸ್ಟುಡಿಯೋ ಹಾಗೂ ನಿರ್ಮಾಪಕ ಕೊಟಪಾಡಿ ರಾಜೇಶ್‌ ಅವರಿಗೆ ಟ್ರೈಬಲ್‌ ಆರ್ಟ್ಸ್‌ ಆಡಳಿತ ಮಂಡಳಿ ನೋಟಿಸ್‌ ಈಗಾಗಲೇ ಕಳುಹಿಸಿದೆ.

ಈ ವಿಚಾರವನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವುದಾಗಿ ಕೊಟಪಾಡಿ ರಾಜೇಶ್‌ ತಿಳಿಸಿದ್ದಾರೆ.ಈ ಎರಡೂ ಚಿತ್ರಗಳೂ ಬಹುತೇಕ ಸಿನಿಮಾ ಕೆಲಸಗಳು ಮುಗಿಸಿದ್ದು, ಇನ್ನು ಕೆಲವೇ ತಿಂಗಳಲ್ಲಿ ತೆರೆಗೆ ಬರಲಿದೆ. ಯಾವ ನಟನ ಚಿತ್ರಕ್ಕೆ ಹೀರೊ ಶೀರ್ಷಿಕೆ ಸಿಗುತ್ತದೆ ಎಂಬ ಕುತೂಹಲ ಸಿನಿಲೋಕದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT