ಬಾರ್ಬಿ ಪಾತ್ರಕ್ಕೆ ಮೆರ್ಗತ್‌ ರಾಬಿ

7

ಬಾರ್ಬಿ ಪಾತ್ರಕ್ಕೆ ಮೆರ್ಗತ್‌ ರಾಬಿ

Published:
Updated:
Prajavani

ಮಕ್ಕಳ ನೆಚ್ಚಿನ ಬಾರ್ಬಿ ಗೊಂಬೆ ಕುರಿತ ಸಿನಿಮಾದಲ್ಲಿ ಬಾರ್ಬಿ ಪಾತ್ರವನ್ನು ಆಸ್ಟ್ರೇಲಿಯಾದ ಚಿತ್ರನಟಿ, ನಿರ್ಮಾಪಕಿ ಮೆರ್ಗತ್‌ ರಾಬಿ ಮಾಡಲಿದ್ದಾರೆ. 

ಬಾರ್ಬಿ ಕುರಿತ ಲೈವ್‌ ಆ್ಯಕ್ಷನ್‌ ಸಿನಿಮಾದಲ್ಲಿ ಬಾರ್ಬಿ ಪಾತ್ರಕ್ಕಾಗಿ ಎರಡು ವರ್ಷಗಳಿಂದ ಮಾತುಕತೆ ನಡೆದಿತ್ತು. ನಟಿಯರಾದ ಆ್ಯಮಿ ಶೂಮರ್‌ ಮತ್ತು ಆ್ಯನ್‌ ಹಾಥೆವೆ ಚಿತ್ರಕ್ಕೆ ಸಹಿ ಮಾಡಿದ್ದರು. ಆದರೆ ನಿರ್ಮಾಣ ಸಂಸ್ಥೆಯೊಂದಿಗಿನ ಮನಸ್ತಾಪ ಮತ್ತು ದಿನಾಂಕ ಹೊಂದಾಣಿಕೆ ಸಾಧ್ಯವಾಗದೆ ಇಬ್ಬರೂ ಹಿಂದೆ ಸರಿದಿದ್ದರು.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನವರಾದ ಮೆರ್ಗತ್‌ ಹಾಲಿವುಡ್‌ನ ಹೆಸರಾಂತ ನಟಿ. ವಯಸ್ಸು 28. ನಟನೆಯೊಂದಿಗೆ ಚಿತ್ರ ನಿರ್ಮಾಣದಲ್ಲಿಯೂ ಸಕ್ರಿಯರು. ಬಾರ್ಬಿ ಸಿನಿಮಾಕ್ಕೆ ತಮ್ಮ ಲಕ್ಕಿಚಾಪ್‌ ಎಂಟರ್‌ಟೇನ್‌ಮೆಂಟ್‌ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಬಂಡವಾಳ ಹೂಡುವ ಮೂಲಕ ಸಹನಿರ್ಮಾಪಕಿಯೂ ಆಗಿದ್ದಾರೆ.

‘ಬಾರ್ಬಿ ಪಾತ್ರವನ್ನು ನಾನೇ ಮಾಡಲಿದ್ದೇನೆ. ಮಕ್ಕಳ ಅಚ್ಚುಮೆಚ್ಚಿನ ಗೊಂಬೆಯ ಕುರಿತಾದ ಈ ಸಿನಿಮಾ ಜಗತ್ತಿನೆಲ್ಲೆಡೆ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ. ಆ ಮೂಲಕ ನಾನೂ ಮಕ್ಕಳ ಮೆಚ್ಚುಗೆ ಗಳಿಸಲಿದ್ದೇನೆ. ಕುತೂಹಲಭರಿತ ಮಗುವಿನ ಜಗತ್ತಿನಲ್ಲಿ ಸಂವಹನ ನಡೆಸುವ ಮೂಲಕ ನನ್ನನ್ನೇ ಕಂಡುಕೊಳ್ಳುವ ಅವಕಾಶವ‌ನ್ನು ನನಗೆ ಈ ಸಿನಿಮಾ ನೀಡಲಿದೆ. ಇದರಿಂದ ನನ್ನ ಆತ್ಮವಿಶ್ವಾಸ ಹೆಚ್ಚಲಿದೆ’ ಎಂದು ಮೆರ್ಗತ್‌ ಹೇಳಿಕೊಂಡಿದ್ದಾರೆ.

ಮೆಟ್ಟೆಲ್‌ ಆ್ಯಂಡ್‌ ವಾರ್ನರ್‌ ಬ್ರದರ್ಸ್‌ ಪಿಕ್ಚರ್ಸ್‌ ಕಂಪನಿ ಈ ಸಿನಿಮಾವನ್ನು ನಿರ್ಮಿಸಲಿದೆ. ಆದರೆ ಚಿತ್ರದ ನಿರ್ದೇಶನ, ಕತೆ, ಚಿತ್ರೀಕರಣ ಸೇರಿದಂತೆ ಯಾವುದೇ ಮಾಹಿತಿಯನ್ನು ಕಂಪನಿಯಾಗಲಿ, ಮೆರ್ಗತ್‌ ಆಗಲಿ ಬಹಿರಂಗಪಡಿಸಿಲ್ಲ. v

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !