ಗುರುವಾರ , ಅಕ್ಟೋಬರ್ 22, 2020
24 °C

ಜೀ5 ನಲ್ಲಿ 'ಪಾಯಿಸನ್‌ 2’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರೈಮ್‌ ಥ್ರಿಲ್ಲರ್‌ ಕತೆಯಾಧಾರಿತ ಹಿಂದಿ ವೆಬ್‌ಸರಣಿ ‘ಪಾಯಿಸನ್‌ 2’. ಅಫ್ತಾಬ್ ಶಿವದಾಸಾನಿ ಹಾಗೂ ಲಕ್ಷ್ಮಿ ರೈ ಈ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸರಣಿಯು ಜೀ 5ನಲ್ಲಿ ಅಕ್ಟೋಬರ್‌ 16 ರಂದು ಬಿಡುಗಡೆಯಾಗಲಿದೆ.

ವಿಶಾಲ್‌ ಪಾಂಡೆ ನಿರ್ದೇಶನದ ವೆಬ್‌ಸರಣಿಗೆ ಪನೋರಮಾ ಎಂಟರ್‌ಟ್ರೈನ್‌ಮೆಂಟ್ ಹಾಗೂ ಬಾಂಬೆ ಮಿಡಿಯಾ ವರ್ಕ್ಸ್‌ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅಫ್ತಾಭ್ ಈ ಸರಣಿಯ ಮೂಲಕ ಡಿಜಿಟಲ್‌ ವೇದಿಕೆಗೆ ಹೆಜ್ಜೆ ಇರಿಸುತ್ತಿದ್ದಾರೆ. ಇದು ಒಟ್ಟು 10 ಎಪಿಸೋಡ್‌ಗಳ ಕತೆಯಾಗಿದೆ.

‘ಪಾಯಿಸನ್‌ 1’ರ ಯಶಸ್ಸು ‘ಪಾಯಿಸನ್‌ 2’ ಸರಣಿ ತರಲು ಸ್ಫೂರ್ತಿಯಾಗಿದೆ ಎನ್ನಲಾಗುತ್ತಿದೆ. ಪಾಯಿಸನ್‌ 2 ಸಂಪೂರ್ಣವಾಗಿ ಸೇಡಿನ ಕತೆಯನ್ನು ಹೊಂದಿದೆ.

ಏಪ್ರಿಲ್‌ 30ಕ್ಕೆ ಈ ವೆಬ್‌ಸರಣಿ ಬಿಡುಗಡೆಯಾಗಬೇಕಿದ್ದು ಲಾಕ್‌ಡೌನ್‌ ಕಾರಣದಿಂದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿತ್ತು. ಇದರ ಟ್ರೇಲರ್‌ ಸೆಪ್ಟೆಂಬರ್‌ 29 ರಂದು ಬಿಡುಗಡೆಯಾಗಿತ್ತು. 

ಪೂಜಾ ಚೋಪ್ರಾ, ರಾಹುಲ್‌ ದೇವ್‌, ವಿನ್ ರಾನಾ, ಝೈನ್ ಇಮಾಮ್‌, ಅಸ್ಮಿತಾ ಸೂದ್‌, ಕರಣ್ ವೀರ್ ಮೆಹ್ರಾ, ಜಾಯ್ ಸೇನ್‌ಗುಪ್ತಾ, ಪವನ್‌ ಚೋಪ್ರಾ, ಗೌರವ್ ಶರ್ಮಾ, ತೆಹರ್‌ ಶಬ್ಬೀರ್‌, ಸಾಕ್ಷಿ ಪ್ರಧಾನ ಮುಂತಾದವರು ಈ ವೆಬ್‌ಸರಣಿಯಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.