ಹೃತಿಕಾ ಶ್ರೀನಿವಾಸ್ ನಾಯಕಿಯಾಗಿ ನಟಿಸಿರುವ ‘ಉಡಾಳ’ ಚಿತ್ರ ಇಂದು ತೆರೆ ಕಾಣುತ್ತಿದೆ. ಅಪ್ಪಟ ಉತ್ತರ ಕರ್ನಾಟಕದ ಸೊಗಡಿನ ಈ ಚಿತ್ರದಲ್ಲಿನ ತಮ್ಮ ರಗಡ್ ಪಾತ್ರ ಕುರಿತು ಅವರು ಮಾತನಾಡಿದ್ದಾರೆ.

‘ಚಿತ್ರದ ಹೆಸರೇ ಹೇಳುವಂತೆ ಇದು ‘ಉಡಾಳ’ರ ಕಥೆ. ಇಲ್ಲಿ ಬರುವ ಎಲ್ಲ ಪಾತ್ರಗಳೂ ಅದೇ ರೀತಿ ಇವೆ. ಯಾರೂ ಗಂಭೀರವಾಗಿರುವುದಿಲ್ಲ. ಕಾಲೇಜು ಹುಡುಗರ ಕಥೆ. ನಾನು ಪಿಂಕಿ ಪಾಟೀಲ್ ಆಗಿ ಕಾಣಿಸಿಕೊಂಡಿದ್ದೇನೆ. ಕಾಲೇಜು ಹುಡುಗಿ. ಚಿತ್ರದ ನಾಯಕ ಪಕ್ಯ ಜತೆ ಪ್ರೇಮ ಕಥೆ ಸಾಗುತ್ತದೆ. ನಾಯಕನ ಊರು ವಿಜಯಪುರ. ನಾನು ಹುಬ್ಬಳ್ಳಿ ಹುಡುಗಿ. ನಮ್ಮಿಬ್ಬರ ಪ್ರೇಮಕಥೆಯ ಜತೆ ಒಂದಷ್ಟು ಕಾಲೇಜು ಸನ್ನಿವೇಶಗಳಿವೆ’ ಎಂದು ಮಾತು ಪ್ರಾರಂಭಿಸಿದರು ಹೃತಿಕಾ.

ನಾಯಕಿಯಾಗಿ ಅವರಿಗಿದು ನಾಲ್ಕನೆ ಸಿನಿಮಾ. ‘ಅಪರೂಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ‘ಆರಾಮ್ ಅರವಿಂದ್ಸ್ವಾಮಿ’ ಚಿತ್ರದ ಮೂಲಕ ಗುರುತಿಸಿಕೊಂಡರು. ‘ಔಟ್ ಆಫ್ ಸಿಲಬಸ್’ ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಂಡರು. ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ನಮ್ಮ ಕುಟುಂಬ ಚಿತ್ರರಂಗದೊಂದಿಗೆ ನಂಟು ಹೊಂದಿದೆ. ನಮ್ಮ ಅತ್ತೆ ಕೂಡ ನಟಿ. ಅವರನ್ನು ನೋಡಿ ನಾನು ನಟಿಯಾಗಬೇಕೆಂದು ಬಂದೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಹೀಗಾಗಿ ಉತ್ತರ ಕರ್ನಾಟಕ ಭಾಷೆ ಸಿನಿಮಾ ಮಾಡಿದ್ದು ನನಗೆ ಒಂದು ರೀತಿ ಸಪ್ರೈಸ್. ಆಡಿಷನ್ನಲ್ಲಿ ನನಗೆ ಉತ್ತರ ಕರ್ನಾಟಕದ ಪದಗಳು ಅರ್ಥವಾಗಿರಲಿಲ್ಲ. ಆದರೆ ನಿರ್ದೇಶಕ ಅಮೋಲ್ ಪಾಟೀಲ್ ಧೈರ್ಯ ತುಂಬಿ ಪಾತ್ರ ನೀಡಿದರು. ಅಲ್ಲಿನ ಭಾಷೆಯ ತರಬೇತಿ ಕೊಡಿಸಿದರು. ನಟನೆ ಜತೆ ನನ್ನ ಪಾತ್ರದ ಡಬ್ಬಿಂಗ್ ಕೂಡ ಮಾಡಿದ್ದೇನೆ. ಅವರು ತರಬೇತಿಯಲ್ಲಿ ಪ್ರತಿ ಪದದ ಅರ್ಥವನ್ನು ತಿಳಿಸಿದರು. ನಾಯಕ ಪೃಥ್ವಿ ಅವರದ್ದು ದಾವಣಗೆರೆ. ಹೀಗಾಗಿ ಅವರಿಗೂ ವಿಜಯಪುರ ಭಾಗದ ಭಾಷೆಯ ತರಬೇತಿ ನೀಡಿದರು’ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು.

‘ನಮ್ ಗಣಿ ಬಿಕಾಂ ಪಾಸ್–2’ ಚಿತ್ರದಲ್ಲಿ ನಟಿಸಿರುವೆ. ‘ಜಾಕಿ–42’ ಚಿತ್ರದಲ್ಲಿಯೂ ಕಾಣಿಸಿಕೊಂಡಿರುವೆ. ಇವುಗಳಲ್ಲದೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿರುವೆ. ‘ಉಡಾಳ’ ಸಿನಿಮಾದಲ್ಲಿ ನಟಿಸುತ್ತೇನೋ ಇಲ್ಲವೋ ಎಂಬ ಅನುಮಾನ ಇತ್ತು. ಆದರೆ ನಿರ್ದೇಶಕ ಅಮೋಲ್ ಪಾಟೀಲ್ ಬರೆದ ಚಿತ್ರಕಥೆ ಕೇಳಿ ಈ ಸಿನಿಮಾ ಮಾಡಲೇಬೇಕೆಂದು ನಿರ್ಧರಿಸಿದೆ. ಈ ಚಿತ್ರದ ಪಾತ್ರ ಒಂದು ರೀತಿ ನನ್ನ ಕನಸಿನ ಪಾತ್ರ. ಭವಿಷ್ಯದಲ್ಲಿ ಪಿಂಕಿ ಪಾಟೀಲ್ ರೀತಿಯ ವಿಭಿನ್ನ ಪಾತ್ರಗಳನ್ನು ಮಾಡುವ ಹಂಬಲವಿದೆ’ ಎನ್ನುತ್ತಾರೆ ಅವರು.

‘ಚಿತ್ರರಂಗದಲ್ಲಿ ಏರಿಳಿತಗಳು ಸಹಜ. ಅನುಭವಗಳಿಂದ ತುಂಬ ಪಾಠ ಕಲಿತಿದ್ದೇನೆ. ಈಗ ಪ್ರೇಕ್ಷಕರ ದೃಷ್ಟಿಕೋನದಿಂದ ಕಥೆ ಕೇಳಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತೇನೆ. ಸಾಮಾನ್ಯರಿಗೆ ಇಷ್ಟವಾಗುವ ಪಾತ್ರಗಳನ್ನು ಮಾಡಬೇಕು. ಚಿತ್ರರಂಗದಲ್ಲಿ ಇನ್ನೂ ತುಂಬ ಕಲಿಯಲು ಇದೆ ಎನ್ನಿಸುತ್ತದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಮಾತಿಗೆ ವಿರಾಮವಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.