ಮಂಗಳವಾರ, ಮೇ 24, 2022
25 °C

ನಟ, ನಟಿಯರ ಸೌಂದರ್ಯ ಪರಿಪೂರ್ಣವಲ್ಲ: ನಟಿ ಮಾಳವಿಕಾ ಮೋಹನನ್ ಹೀಗಂದಿದ್ದು ಯಾಕೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ಸಿನಿಮಾ ನಟ, ನಟಿಯರ ಫೋಟೊಗಳನ್ನು ನೋಡಿ ಅವರ ಚರ್ಮ, ಕೂದಲು, ಉಗುರು, ದೇಹ ಸುಂದರವಾಗಿ ಹಾಗೂ ಪರಿಪೂರ್ಣವಾಗಿದೆ ಎಂದು ಭಾವಿಸಬೇಡಿ. ವಾಸ್ತವದಲ್ಲಿ ಯಾರೂ ಪರಿಪೂರ್ಣರಲ್ಲ. ಇದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು’. ಹೀಗೆ ಹೇಳಿದ್ದು ನಟಿ ಮಾಳವಿಕಾ ಮೋಹನನ್.

ಅಂದಹಾಗೆ, ಅವರು ಹೀಗೆ ಹೇಳಲು ಕಾರಣವಿದೆ. ಮುಖದ ಮೇಲಿನ ಮೊಡವೆಯೊಂದರ ಕಾರಣಕ್ಕಾಗಿ ಶೂಟಿಂಗ್‌ನಲ್ಲಿ ಭಾಗಿಯಾಗಲು ಸಾಧ್ಯವಾಗದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಬರೆದುಕೊಂಡಿರುವ ಅವರು, ‘ನೋ ಶೂಟ್ ಡೇ ಈಸ್ ಲೆಟ್ ಯುವರ್ ಸ್ಕಿನ್ ಬ್ರೀದ್ ಡೇ’ ಎಂದು ಉಲ್ಲೇಖಿಸಿದ್ದಾರೆ. ಜತೆಗೆ ತಮ್ಮ ಫೋಟೊವನ್ನೂ ಪೋಸ್ಟ್ ಮಾಡಿದ್ದಾರೆ.

‘ನನಗೆ ನಿನ್ನೆ ಅತೀ ಮುಖ್ಯವಾದ ಚಿತ್ರೀಕರಣವೊಂದರಲ್ಲಿ ಭಾಗಿಯಾಗುವುದಕ್ಕಿತ್ತು. ಆದರೆ ಈ ಮೊಡವೆ ಚಿತ್ರೀಕರಣಕ್ಕೂ ಎರಡು ದಿನ ಮೊದಲೇ ವಕ್ಕರಿಸಿಕೊಂಡು ಮುಯ್ಯಿ ತೀರಿಸಿಕೊಳ್ಳಲು ಬಯಸಿತು. ಚರ್ಮವು ನಮ್ಮ ಆಂತರಿಕ ಆರೋಗ್ಯದ ಪ್ರತಿಬಿಂಬ ಎಂದು ಬಾವಿಸಿದ್ದ ನಾನು ಆರೋಗ್ಯಕರ ಆಹಾರ ಸೇವನೆ ಮತ್ತು ವ್ಯಾಯಾಮದ ಮೂಲಕ ಸದಾ ಚೆನ್ನಾಗಿರಲು ಪ್ರಯತ್ನಿಸುತ್ತೇನೆ. ಆದರೆ ಹಾಗಿಲ್ಲ. ನಿಮ್ಮಲ್ಲಿ ಒಂದು ವಿಷಯ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಫೋಟೊಗಳಲ್ಲಿ ನೋಡಿ ಸಿನಿಮಾ ನಟ, ನಟಿಯರ ಚರ್ಮ, ಕೂದಲು, ಉಗುರು, ದೇಹ ಸುಂದರವಾಗಿ ಹಾಗೂ ಪರಿಪೂರ್ಣವಾಗಿದೆ ಎಂದುಕೊಳ್ಳಬೇಡಿ. ವಾಸ್ತವದಲ್ಲಿ ಯಾರೂ ಪರಿಪೂರ್ಣರಲ್ಲ. ನಿನ್ನೆ ನಾನು ಭಾಗವಹಿಸಬೆಕಿದ್ದ ಜಾಹೀರಾತಿನ ದೃಶ್ಯದಲ್ಲಿ ನೀವು ನನ್ನನ್ನು ನೋಡಿದರೆ, ಎಂಥಾ ದೋಷರಹಿತ ಚರ್ಮ ಎಂದು ಉದ್ಘರಿಸುವಿರಿ. ನಮ್ಮನ್ನು ದೋಷರಹಿತವಾಗಿ ಜಗತ್ತಿಗೆ ತೋರಿಸಲು ಇಡೀ ತಂಡ ನಮ್ಮ ಜತೆಗಿರುತ್ತದೆ. ಆದರೆ ವಾಸ್ತವ ಅದಲ್ಲ. ಹೀಗಾಗಿ ಪರಿಪೂರ್ಣತೆಯೆಂಬ ಕಲ್ಪನೆ ಬದಿಗಿಡಿ. ಮೊಡವೆಯಂಥ ಸಮಸ್ಯೆಗಳು ಬಂದಾಗ ತಾತ್ಕಾಲಿಕ ಅತಿಥಿಯಂತೆ ಪರಿಗಣಿಸಿ. ಅವು ಸ್ವಲ್ಪ ಸಮಯದಲ್ಲಿ ದೂರವಾಗುತ್ತವೆ’ ಎಂದು ಮಾಳವಿಕಾ ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು