ನೀವು ಕೆಟ್ಟವರಲ್ಲ.. ಸಮಾಜ ಮಾತ್ರ: ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಬೋಲ್ಡ್ ಹೇಳಿಕೆ

ಬೆಂಗಳೂರು: ಶ್ರೀಲಂಕಾ ಮೂಲದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಚಂದನವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದ ನಟಿ, ಈಗ ಮತ್ತೊಮ್ಮೆ ಸಾಮಾಜಿಕ ತಾಣಗಳ ಮೂಲಕ ಹವಾ ಸೃಷ್ಟಿಸಿದ್ದಾರೆ.
ನಟಿ ಜಾಕ್ವೆಲಿನ್, ಬ್ಯಾಕ್ಲೆಸ್ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಅಷ್ಟೇ ಅಲ್ಲದೆ, ನೀವು ಕೆಟ್ಟವರಲ್ಲ.. ಸಮಾಜ ಮಾತ್ರ.. ಎಂಬ ಅಡಿಬರಹವನ್ನು ಜಾಕ್ವೆಲಿನ್ ತಮ್ಮ ಪೋಸ್ಟ್ಗೆ ನೀಡಿದ್ದು, ನಿಮ್ಮ ಜೀವನವನ್ನು ನೀವು ನಡೆಸಿ ಎಂಬ ಅರ್ಥದ ಹ್ಯಾಶ್ಟ್ಯಾಗ್ ನೀಡಿದ್ದಾರೆ.
ಚಂದನವನಕ್ಕೆ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್ ಚಿತ್ರವನ್ನು 8 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.
‘ವಿಕ್ರಾಂತ್ ರೋಣ’ದಲ್ಲಿ ಕುತೂಹಲ ಮೂಡಿಸಿದ ಜಾಕ್ವೆಲಿನ್ ವಿಶೇಷ ಪಾತ್ರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.