ಶನಿವಾರ, ಸೆಪ್ಟೆಂಬರ್ 25, 2021
22 °C

‘ವಿಕ್ರಾಂತ್‌ ರೋಣ’ದಲ್ಲಿ ಕುತೂಹಲ ಮೂಡಿಸಿದ ಜಾಕ್ವೆಲಿನ್‌ ವಿಶೇಷ ಪಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ಕಿಚ್ಚ ಸುದೀಪ್‌ ನಟನೆಯ ಪ್ಯಾನ್ ಇಂಡಿಯಾ ಬಿಗ್‌ಬಜೆಟ್‌ ಚಿತ್ರ ‘ವಿಕ್ರಾಂತ್‌ ರೋಣ’ದಲ್ಲಿ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ‘ಸುದೀಪ್‌ ಅವರ ಜೊತೆಗಿನ ನಟನೆಯ ಅನುಭವ ನೆನಪಿನಲ್ಲಿ ಉಳಿಯುವಂತಹದು’ ಎಂದಿದ್ದಾರೆ ಜಾಕ್ವೆಲಿನ್‌.

‘ಬಿಗ್‌ ಅನೌನ್ಸ್‌ಮೆಂಟ್‌. ಹೌದು, ನಾನು ವಿಕ್ರಾಂತ್‌ ರೋಣ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ಮಾಡುತ್ತಿದ್ದೇನೆ. ಚಿತ್ರದಲ್ಲಿ ನಾನು ಹೇಗೆ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವುದನ್ನು ಪ್ರೇಕ್ಷಕರ ಮುಂದಿಡಲು ಕಾತುರದಿಂದಿದ್ದೇನೆ. ಸುದೀಪ್‌ ಅವರ ಜೊತೆಗಿನ ನಟನೆಯ ಅನುಭವ ನೆನಪಿನಲ್ಲಿ ಉಳಿಯುವಂತಹದು’ ಎಂದು ‘ವಿಕ್ರಾಂತ್‌ ರೋಣ’ ಮುಖಾಂತರ ಚಂದನವನಕ್ಕೂ ಕಾಲಿಟ್ಟಿರುವ ಜಾಕ್ವೆಲಿನ್‌ ಟ್ವೀಟ್‌ ಮೂಲಕ ಹೇಳಿದ್ದಾರೆ.

ಚಿತ್ರವು ಆಗಸ್ಟ್‌ 19ರಂದು ತೆರೆಯ ಮೇಲೆ ಬರಲಿದೆ ಎಂದು ನಟ ಸುದೀಪ್‌ ಈ ಹಿಂದೆ ತಿಳಿಸಿದ್ದರು. ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಈಗಷ್ಟೇ ಅನುಮತಿ ನೀಡಿರುವುದರಿಂದ ಹಾಗೂ ಪ್ರೇಕ್ಷಕರ ಸಂಖ್ಯೆಯ ಮೇಲೆ ನಿರ್ಬಂಧವನ್ನೂ ಹೇರಿರುವುದರಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜ್ಯಾಕ್‌ ಮಂಜು ಈ ಚಿತ್ರದ ನಿರ್ಮಾಪಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು