’ಧಡಕ್ ಚಿತ್ರಕ್ಕಾಗಿ ಕೂದಲನ್ನು ಕತ್ತರಿಸಿದ್ದೆ. ಅಂದು ಅಮ್ಮ ಬೈದೇ ಬಿಟ್ಟಿದ್ದರು. ಪ್ರತಿ ಎರಡು ಮೂರು ದಿನಗಳಿಗೆ ಒಮ್ಮೆ ತಲೆಗೆ ಎಣ್ಣೆ ಹಾಕಿ, ಮಸಾಜ್ ಮಾಡುತ್ತ, ಬೇಸರಿಸಿಕೊಳ್ಳುತ್ತಿದ್ದರು‘ ಎಂದು ಜಾಹ್ನವಿ ಕಪೂರ್ ತಮ್ಮಮ್ಮ ಶ್ರೀದೇವಿಯನ್ನು ನೆನೆದಿದ್ದಾರೆ.
ಯಾವುದೇ ಸಿನಿಮಾದ ಪಾತ್ರಕ್ಕಾಗಿ ಕೂದಲನ್ನು ಕತ್ತರಿಸಕೂಡದು, ಚಂದದ ಕೇಶರಾಶಿ ನಿನ್ನದು ಎಂದು ಅಮ್ಮ ಸದಾ ಹೇಳುತ್ತಿದ್ದರು. ಅವರ ನೆನಪಿನಲ್ಲಿಯೇ ನಾನು ಈ ನಿರ್ಧಾರ ಕೈಗೊಂಡಿರುವೆ. ಯಾವುದೇ ಕಾರಣಕ್ಕೂ ನನ್ನ ಕೂದಲಿಗೆ ಕತ್ತರಿ ತಾಕಿಸುವುದಿಲ್ಲ. ಕತ್ತರಿಸುವುದಿಲ್ಲ ಎಂದು ತಮ್ಮ ನೆನಪುಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.
ಒಂದು ಪಾತ್ರಕ್ಕಾಗಿ ಮೂಳೆ ಮುರಿತ ಅನುಭವಿಸಬಲ್ಲೆ, ರಕ್ತಹರಿಸಬಲ್ಲೆ. ಆದರೆ ಕೂದಲು ಮಾತ್ರ ಕತ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.