ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್ ರಾಜ್‌ಕುಮಾರ್ ಅಭಿನಯದ ‍ಜೇಮ್ಸ್‌ಗೆ ಮುಹೂರ್ತ

Last Updated 23 ಜನವರಿ 2020, 19:30 IST
ಅಕ್ಷರ ಗಾತ್ರ

ಚೇತನ್‌ಕುಮಾರ್ ನಿರ್ದೇಶನದ ‍ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್‌’ ಚಿತ್ರದ ಮುಹೂರ್ತ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ಚಿತ್ರದ ಕಥೆಯ ಎಳೆಯನ್ನು ಗುಟ್ಟಾಗಿಯೇ ಇರಿಸಿಕೊಂಡ ಚಿತ್ರತಂಡ, ಎಲ್ಲವನ್ನೂ ಚಿತ್ರಮಂದಿರಕ್ಕೇ ಬಂದು ನೋಡಬೇಕು ಎಂದು ಹೇಳಿತು.

ಚಿತ್ರದ ಕಲಾವಿದರ ಆಯ್ಕೆಯು ಸದ್ಯದಲ್ಲೇ ಪೂರ್ಣ ಆಗಲಿದೆ. ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಉದ್ದೇಶವೂ ಇದೆ ಎಂಬ ಮಾಹಿತಿ ನೀಡಿತು. ಚಿತ್ರವನ್ನು ಈ ವರ್ಷದ ಡಿಸೆಂಬರ್‌ಗೆ ವೀಕ್ಷಕರ ಮುಂದಿರಿಸುವ ಉದ್ದೇಶ ತಂಡಕ್ಕಿದೆ. ‘ಟಗರು’ ಚಿತ್ರಕ್ಕೆ ಸಂಗೀತ ನೀಡಿ ಸಿನಿ ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಛಾಯಾಗ್ರಹಣದ ಹೊಣೆಯನ್ನು ಶ್ರೀಶ ಕೂದುವಳ್ಳಿ ಹೊತ್ತುಕೊಂಡಿದ್ದಾರೆ. ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪುನೀತ್ ಅವರ ಪತ್ನಿ ಅಶ್ವಿನಿ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT