ಕಾಜಲ್ ಅಗರ್ವಾಲ್ ತೆಲುಗು ಚಿತ್ರರಂಗದ ಮೋಹಕ ತಾರೆ. ಆಕೆ ಬಣ್ಣದಲೋಕ ಪ್ರವೇಶಿಸಿ ಹದಿನೈದು ವರ್ಷಗಳು ಉರುಳಿವೆ. ಮೋಹಕ ನೋಟ, ಬಬ್ಲಿ ನೇಚರ್, ವೈವಿಧ್ಯಮಯ ವ್ಯಕ್ತಿತ್ವದ ಮೂಲಕ ಈ ಪಂಜಾಬಿ ಬೆಡಗಿ ತೆಲುಗಿನ ಮನೆ ಮಾತಾಗಿದ್ದಾರೆ. 34 ವರ್ಷದ ತುಂಬಿದರೂ ಕಾಜಲ್ ಯಾವಾಗ ಸಪ್ತಪದಿ ತುಳಿಯುತ್ತಾರೆ? ಎಂಬ ಚರ್ಚೆ ಟಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಈ ಸುದ್ದಿ ಅವರ ಕಿವಿಗೂ ಬಿದ್ದಂತಿದೆ. ಹಾಗಾಗಿಯೇ, ಕಾಜಲ್ ‘ತಾನು ಮದುವೆಯಾಗುವ ಆಲೋಚನೆಯಲ್ಲಿ ಇದ್ದೇನೆ’ ಎಂದು ದೃಢಪಡಿಸಿದ್ದಾರೆ.

ತೆಲುಗಿನ ಟಿ.ವಿ. ಶೋವೊಂದರಲ್ಲಿ ಭಾಗವಹಿಸಿದ್ದ ಅವರು ಶೀಘ್ರವೇ ಹಣೆಮಣೆ ಏರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ವಿಜಯವಾಡದಲ್ಲಿ ನಡೆದ ಶಾಂಪಿಂಗ್ ಕಾಂಪ್ಲೆಕ್ಸ್ವೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಜಲ್ ಪಾಲ್ಗೊಂಡಿದ್ದರು. ಅಲ್ಲಿದ್ದ ಮಾಧ್ಯಮದವರು ಮದುವೆಯ ವಿಷಯ ಪ್ರಸ್ತಾಪಿಸಿದಾಗ ಕಾಜಲ್ ಒಮ್ಮೆಲೆ ಸಿಟ್ಟಾದರಂತೆ.

‘ನನ್ನ ಮದುವೆ ವಿಚಾರದಲ್ಲಿ ಯಾರೊಬ್ಬರೂ ಮೂಗು ತೂರಿಸುವ ಅಗತ್ಯವಿಲ್ಲ’ ಎಂದು ಮುಖಕ್ಕೆ ಹೊಡೆದಂತೆ ಉತ್ತರಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈಗ ಅವರೇ ಮದುವೆಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಕಾಜಲ್ ಅವರನ್ನು ಕೈಹಿಡಿಯುವ ವ್ಯಕ್ತಿ ಹೇಗಿರಬೇಕು ಎನ್ನುವ ಪ್ರಶ್ನೆಗೆ, ‘ಆತ ನನ್ನ ಬಗ್ಗೆ ವಿಶೇಷ ಕಾಳಜಿವಹಿಸಬೇಕು’ ಎಂದು ಉತ್ತರಿಸಿದ್ದಾರೆ.

ಈ ಹಿಂದೆ ಕಾಜಲ್ ಕುಟುಂಬದ ಪರಿಚಯವಿರುವ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಕೆ ‘ಅದೊಂದು ಮುಗಿದ ಅಧ್ಯಾಯ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಕೂಡ ಮದುವೆಯಾಗಿದ್ದಾರೆ. ನಾನು ವೃತ್ತಿಬದುಕಿನ ಉತ್ತುಂಗದಲ್ಲಿದ್ದೆ. ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದವು. ಹಾಗಾಗಿಯೇ, ಮದುವೆಗೆ ಕೊಂಚ ತಡವಾಯಿತು. ಈಗ ಅಂತಹ ಪರಿಸ್ಥಿತಿ ಇಲ್ಲ’ ಎಂದಿದ್ದಾರೆ ಕಾಜಲ್.

ಸದ್ಯ ಅವರು ತಮಿಳಿನ ‘ಇಂಡಿಯನ್ 2’, ಹಿಂದಿಯ ‘ಮುಂಬೈ ಸಗ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ತೆಲುಗು ಮತ್ತು ಇಂಗ್ಲಿಷ್ನಲ್ಲಿ ನಿರ್ಮಾಣವಾಗುತ್ತಿರುವ ‘ಮೋಸಗಲ್ಲು’ ಚಿತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ತಮಿಳಿನ ‘ಪ್ಯಾರೀಸ್ ಪ್ಯಾರೀಸ್’ ಚಿತ್ರದಲ್ಲೂ ಅವರೇ ನಾಯಕಿ. ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.