ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cinema News | ಡೈನಾಮಿಕ್‌ ಪ್ರಿನ್ಸ್‌ಗೆ ಕಲೈ ಆ್ಯಕ್ಷನ್‌ ಕಟ್‌

Published 21 ಜುಲೈ 2023, 19:13 IST
Last Updated 21 ಜುಲೈ 2023, 19:13 IST
ಅಕ್ಷರ ಗಾತ್ರ

ನೃತ್ಯ ನಿರ್ದೇಶಕ ಕಲೈ ಅವರು ನಟ ಪ್ರಜ್ವಲ್‌ ದೇವರಾಜ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗುತ್ತಿದ್ದಾರೆ. ರಾಜಲಕ್ಷ್ಮೀ ಎಂಟರ್ಟೈನ್ಮೆಂಟ್‌ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಾಣ ಮಾಡುತ್ತಿರುವ ಹಾಗೂ ಕಲೈ ನಿರ್ದೇಶಿಸುತ್ತಿರುವ ನೂತನ ಚಿತ್ರದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ.

ಸಾಮಾಜಿಕ ಕಳಕಳಿಯ ಕಥಾಹಂದರದ ಈ ಚಿತ್ರದ ನಾಯಕನಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರೆ. ಕಲೈ ಅವರ ನಿರ್ದೇಶನದ ಚೊಚ್ಚಲ ಚಿತ್ರವಿದು. ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲೈ, ಜನಪ್ರಿಯ ನಾಯಕರ 300ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣಕ್ಕೆ ಚಿತ್ರತಂಡ ಪೂರ್ವಸಿದ್ಧತೆ ಆರಂಭಿಸಿದ್ದು, ‘ಹೆಚ್ಚಿನ ಭಾಗದ ‌ಚಿತ್ರೀಕರಣ ಅದ್ದೂರಿ ಸೆಟ್‌ಗಳಲ್ಲೇ 80 ದಿನ ನಡೆಯಲಿದೆ. ಆರು ಸಾಹಸ ದೃಶ್ಯಗಳು ಹಾಗೂ ಆರು ಹಾಡುಗಳು ಈ ಚಿತ್ರದಲ್ಲಿದೆ’ ಎಂದಿದ್ದಾರೆ ನಿರ್ದೇಶಕರು. ಶಂಕರ್ ಹಾಗೂ ಚಂದ್ರಮೌಳಿ(ಕೆ.ಜಿ.ಎಫ್ ಖ್ಯಾತಿ) ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT