ಈ ವಾರ ತೆರೆಗೆ ಬರುವ ಕನ್ನಡ ಸಿನಿಮಾಗಳು

ಗುರುವಾರ , ಏಪ್ರಿಲ್ 25, 2019
21 °C

ಈ ವಾರ ತೆರೆಗೆ ಬರುವ ಕನ್ನಡ ಸಿನಿಮಾಗಳು

Published:
Updated:
Prajavani

ಗೌಡ್ರು ಸೈಕಲ್

ಪ್ರಶಾಂತ್ ಎಳ್ಳಂಪಳ್ಳಿ ನಿರ್ದೇಶನದ ಸಿನಿಮಾ ಇದು. ಹಳೆಯ ಮಾದರಿಯ ಸೈಕಲ್‌ ಒಂದನ್ನು ಚಿತ್ರದ ಕೇಂದ್ರವಾಗಿ ಇರಿಸಿಕೊಂಡು, ‘ಹಳೆಯದಾಯ್ತು ಎಂದು ವಸ್ತುವನ್ನು, ವಯಸ್ಸಾಯ್ತು ಎಂದು ಮನುಷ್ಯರನ್ನು ನಿರ್ಲಕ್ಷಿಸಬಾರದು’ ಎನ್ನುವ ಸಂದೇಶ ನೀಡುವ ಪ್ರಯತ್ನ ಈ ಸಿನಿಮಾದಲ್ಲಿದೆ. ಕೃಷ್ಣಮೂರ್ತಿ ಕವತ್ತಾರ್, ಬಿಂಬಶ್ರೀ ನೀನಾಸಂ, ಶಶಿಕಾಂತ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

ಕವಚ

ಎಂ.ವಿ.ವಿ ಸತ್ಯನಾರಾಯಣ ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರ ‘ಕವಚ’ ಬಿಡುಗಡೆಯಾಗುತ್ತಿದೆ. ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಇಶಾ ಕೊಪ್ಪಿಕರ್, ಕೃತಿಕ ಜಯಕುಮಾರ್, ವಸಿಷ್ಠ ಸಿಂಹ, ಬೇಬಿ ಮಿನಾಕ್ಷಿ, ರವಿಕಾಳೆ, ರಾಜೇಶ್, ಜಯಪ್ರಕಾಶ್, ತಬಲ ನಾಣಿ, ರಮೇಶ್ ಭಟ್, ಬಾಲರಾಜ್ ಮುಂತಾದವರಿದ್ದಾರೆ. ಜಿ.ವಿ.ಆರ್ ವಾಸು ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ರಾಹುಲ್ ಶ್ರೀವಾಸ್ತವ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಇದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !