‘ಕಪೋ ಕಲ್ಪಿತಂ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಸುಮಿತ್ರಾ ರಮೇಶ್ ಗೌಡ ಅವರು ಈ ಚಿತ್ರದ ನಾಯಕಿ ಮತ್ತು ನಿರ್ದೇಶಕಿ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಸುಮಿತ್ರಾ, ‘ಕಪೋ ಕಲ್ಪಿತಂ ಎಂದರೆ ಸ್ವಯಂ ಕಲ್ಪನೆ ಎಂದು ಅರ್ಥ. ಒಂದು ಸಂಗತಿ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವಾಗ ಹೆಚ್ಚಿನ ವಿಷಯಗಳು ಸೇರಿಕೊಂಡು ಹಲವಾರು ಸಂದೇಹಗಳಿಗೆ ಕಾರಣವಾಗುತ್ತದೆ. ಸ್ವಲ್ಪ ಹಾರರ್ ಕಥಾ ಹಂದರ ಇರುವ ಚಿತ್ರ ಇದು’ ಎಂದಿದ್ದಾರೆ.

ಪ್ರೀತಂ ಮಕ್ಕಿ ಚಿತ್ರದ ನಾಯಕ. ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸಂದೀಪ್ ಮಲಾನಿ ಇದ್ದಾರೆ. ನಿರೂಪಕನ ಪಾತ್ರದಲ್ಲಿ ಗೌರೀಶ್ ಅಕ್ಕಿ, ಇತರ ಪಾತ್ರಗಳಲ್ಲಿ ಶಿವರಾಜ್ ಕರ್ಕೇರ, ರಾಜೇಶ್ ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್ ಗೌಡ ಇದ್ದಾರೆ.

ರಚನೆ, ಚಿತ್ರಕಥೆ, ಸಾಹಿತ್ಯ ಸಂಗೀತ ಗಣಿದೇವ್ ಕಾರ್ಕಳ ಅವರದ್ದು. ಸವ್ಯಾಚಿ ಕ್ರಿಯೇಷನ್ಸ್ ಮೂಲಕ ಅಕ್ಷರ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಮೇಶ್ ಚಿಕ್ಕೇಗೌಡ, ಕನ್ನಿಕಾ ಪೂಜಾರಿ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.