ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಯೊಂದು ಮೂರು ನಿರ್ದೇಶಕರು!

Last Updated 19 ಏಪ್ರಿಲ್ 2021, 8:25 IST
ಅಕ್ಷರ ಗಾತ್ರ

ಬೆಂಗಳೂರು: ಒಂದೇ ಸಿನಿಮಾದಲ್ಲಿ ಹಲವು ಕಥೆಗಳಿದ್ದ ‘ಕಥಾಸಂಗಮ’ ಚಂದನವನದಲ್ಲಿ ಕೆಲ ವರ್ಷದ ಹಿಂದೆ ಸದ್ದು ಮಾಡಿತ್ತು. ಇದೇ ಮಾದರಿಯ ಸಿನಿಮಾವೊಂದು ಇದೀಗ ಗಾಂಧಿನಗರದಲ್ಲಿ ಸದ್ದಿಲ್ಲದೇ ಸೆಟ್ಟೇರಿದೆ.

ಒಂದೇ ಕಥೆಯಲ್ಲಿ ಮೂರು ಸಂದೇಶ ಇರುವ ಕಥೆಗಳನ್ನು ಒಗ್ಗೂಡಿಸಿ ‘ಶಾಂತಿಯನ್ನು ಕಳೆದುಕೊಳ್ಳಬೇಡಿ’ ಎಂಬ ಹೊಸ ಸಿನಿಮಾವನ್ನು ತೆರೆ ಮೇಲೆ ತರಲು ಹೊಸಬರ ತಂಡವೊಂದು ಪ್ರಯತ್ನಿಸಿದೆ. ‘ಚುಕ್ಕಿ, ಮೀರಾ ಮಾಧವ, ಮೇಘ ಮೈಯೂರಿ, ಅಂಬಾರಿ’ಯಂತಹ ಧಾರಾವಾಹಿ ಹಾಗೂ ಕನ್ನಡ ಹಾಗೂ ತುಳು ಸಿನಿಮಾದಲ್ಲಿ ಸಹ-ನಿರ್ದೇಶಕರಾಗಿ ಅನುಭವ ಇರುವ ವಿಘ್ನೇಶ್ ಶೇರೆಗಾರ್ ಅವರು ಮೊದಲ ಬಾರಿಗೆ ಚಂದನವನದಲ್ಲಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಗಿರೀಶ್ ಕಾಸರವಳ್ಳಿ ಅವರ ಸಿನಿಮಾದಲ್ಲಿ ನಿರ್ದೇಶನದ ಅನುಭವ ಇರುವ ಬಾಸುಮ ಕೊಡಗು, ಹಾಗೂ ಕಿರು ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಶಿವ ಅವರ ಜೊತೆಗೂಡಿ ವಿಘ್ನೇಶ್‌ ಇದನ್ನು ರಚಿಸಿದ್ದಾರೆ. ವಿಘ್ನೇಶ್ ಅವರ ನಿರ್ದೇಶನದ ಮೊದಲ ಭಾಗದ ಕಥೆ ಮಾನವನ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಮನುಷ್ಯ ಸತ್ತ ಮೇಲೂ ಜೀವಂತವಾಗಿರುವ ಬಗ್ಗೆ ಅವರು ಕಥೆ ಹೇಳುತ್ತಾರೆ. ಎರಡನೇ ಭಾಗದ ಕಥೆಯನ್ನು ಬಾಸುಮ ಕೊಡಗು ಅವರು ನಿರ್ದೇಶಿಸುತ್ತಿದ್ದು, ಇದರಲ್ಲಿ ತಾಯಿ ಮಗುವಿನ ಸಂಬಂಧದ ಬಗ್ಗೆ ಹೇಳಿದ್ದಾರೆ. ಮೂರನೇ ಕಥೆ, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವ ಹುಡುಗನೊಬ್ಬ ಹ್ಯಾಕರ್ ಆಗಿ ಬದಲಾಗುವ ಕುರಿತಾಗಿದೆ. ಇದನ್ನು ಶಿವ ಅವರು ನಿರ್ದೇಶಿಸುತ್ತಿದ್ದಾರೆ.

ನಾಯಕ ನಟನಾಗಿ ಕಾರ್ತಿಕ್ ಹಾಗೂ ನಾಯಕಿಯಾಗಿ ಹರ್ಷಿತಾ ಅಭಿನಯಿಸಿದ್ದು, ಹಿರಿಯ ನಟರಾದ ಜಿ.ಕೆ. ಶಂಕರ್, ರಾಜಣ್ಣ ತಾರಾಬಳಗದಲ್ಲಿದ್ದಾರೆ. ಕಾರ್ತಿಕ್, ಇಂದ್ರಜಿತ್, ಹರ್ಷಿತಾ, ಸಂಗೀತ, ಚಂದ್ರಕಲಾ ಭಟ್,ರಾಕೇಶ್, ಸಂಪತ್ ಶಾಸ್ತ್ರೀ ,ಕಾವ್ಯ ಕೊಡಗು ಹೀಗೆ ಹೊಸಮುಖಗಳಿವೆ. ಪದ್ಮಾವತಿ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಕಲ್ಕಿಅಭಿಷೇಕ್ ಹಾಗೂ ಜಾನ್ ಮೊಜಾರ್ಟ್ ಅವರ ಸಂಗೀತ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT