ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಪ್ತ ಸಾಗರ...’ ದಿನಾಂಕ ಘೋಷಣೆ | 12 ವರ್ಷಗಳ ಹಿಂದೆಯೇ ಕಥೆ ಬರೆದಿದ್ದೆ; ಹೇಮಂತ್‌

Published 15 ಜೂನ್ 2023, 10:13 IST
Last Updated 15 ಜೂನ್ 2023, 10:13 IST
ಅಕ್ಷರ ಗಾತ್ರ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂದು ನಿರ್ದೇಶಕ ಹೇಮಂತ್‌ ಎಂ.ರಾವ್‌ ಈ ಹಿಂದೆಯೇ ತಿಳಿಸಿದ್ದರು. ಗುರುವಾರ(ಜೂನ್‌ 15) ಎರಡೂ ಭಾಗಗಳ ರಿಲೀಸ್‌ ದಿನಾಂಕ ಘೋಷಣೆಯಾಗಿದೆ.

ರಕ್ಷಿತ್‌ ಶೆಟ್ಟಿ ನಟನೆಯ ಈ ಸಿನಿಮಾ ‘ಸೈಡ್‌–A’ ಹಾಗೂ ‘ಸೈಡ್‌–B’ ಎಂಬ ಅಡಿಬರಹದಡಿ ಬಿಡುಗಡೆಯಾಗುತ್ತಿದ್ದು, ‘ಸೈಡ್‌–A’ ಇದೇ ಸೆ.1ರಂದು ತೆರೆಕಾಣಲಿದೆ. ಇದಾಗಿ 50 ದಿನಗಳಲ್ಲೇ ಎಂದರೆ ಅ.20ರಂದು ‘ಸೈಡ್‌–B’ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ‘ಮನು’ ಎಂಬ ಪಾತ್ರವನ್ನು ರಕ್ಷಿತ್‌ ಶೆಟ್ಟಿ ಅವರು ನಿಭಾಯಿಸಿದ್ದು, ಅವರಿಗೆ ಎರಡು ಶೇಡ್ಸ್‌ ಇವೆ. ದಶಕದ ಹಿಂದೆ ನಡೆಯುವ ಒಂದು ತೀವ್ರವಾದ ಪ್ರೇಮಕಥೆಯನ್ನು ಈ ಸಿನಿಮಾ ಹೊಂದಿದೆ. ‘ಸೈಡ್‌–A’ಯಲ್ಲಿ ‘ಮನು’ವಿನ ಪ್ರೀತಿಯ ಆರಂಭಿಕ ಹೆಜ್ಜೆಗಳನ್ನು ಹಿಡಿದಿಟ್ಟಿರುವಂತಿದೆ. ‘ಸೈಡ್‌–B’ಯಲ್ಲಿ ‘ಮನು’ವಿನ ಇನ್ನೊಂದು ಮುಖ ಅನಾವರಣಗೊಂಡಿದೆ. ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್‌ ‘ಪ್ರಿಯಾ’ ಎಂಬ ಪಾತ್ರದ ಮೂಲಕ ಹಾಗೂ ‘ಸುರಭಿ’ ಎಂಬ ಪಾತ್ರದ ಮೂಲಕ ನಟಿ ಚೈತ್ರಾ ಆಚಾರ್‌, ರಕ್ಷಿತ್‌ಗೆ ಜೋಡಿಯಾಗಿದ್ದಾರೆ. 

ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿರುವ ಹೇಮಂತ್‌, ‘ಈ ಸಿನಿಮಾದ ಕಥೆಯನ್ನು ನಾನು 12 ವರ್ಷಗಳ ಹಿಂದೆಯೇ ಬರೆದಿದ್ದೆ. ಹೃದಯಕ್ಕೆ ಬಹಳ ಸನಿಹದಲ್ಲಿರುವ ಸಿನಿಮಾವಿದು. ಅಲ್ಲಿಂದಿತ್ತೀಚೆಗೆ ಈ ಕಥೆ ವಿಕಸನಗೊಂಡಿದೆ. ಇದೀಗ ಈ ಕಥೆಯನ್ನು ನಿಮ್ಮ ಮುಂದೆ ಹೇಳುವ ಸಮಯ ಬಂದಿದೆ’ ಎಂದಿದ್ದಾರೆ. ಸಿನಿಮಾದಲ್ಲಿ ಎರಡು ಶೇಡ್ಸ್‌ನಲ್ಲಿ ರಕ್ಷಿತ್‌ ಕಾಣಿಸಿಕೊಳ್ಳಬೇಕಿದ್ದ ಕಾರಣ 137 ದಿನಗಳ ಸುದೀರ್ಘ ಚಿತ್ರೀಕರಣ ನಡೆದಿತ್ತು. ಕೆವಿಎನ್‌ ಪ್ರೊಡಕ್ಷನ್ಸ್‌ ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT