ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ ನಾಗ್ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದು, ಚಿತ್ರರಂಗದ ಅನೇಕ ಗಣ್ಯರು ಅವರಿಗೆ ಶುಭ ಹಾರೈಸಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದ ಅನಂತ ನಾಗ್ ‘ಸಂಕಲ್ಪ’ (1973) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ನಟ ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಅನೇಕರು ಅವರಿಗೆ ಶುಭಾಶಯ ಕೋರಿದ್ದಾರೆ.

ಅನಂತ ನಾಗ್ ಜೊತೆ ಇರುವ ಚಿತ್ರವೊಂದನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಂಚಿಕೊಂಡಿರುವ ಶಿವರಾಜ್ಕುಮಾರ್, ‘ಚಿತ್ರರಂಗದಲ್ಲಿ 50 ವರ್ಷ ಯಶಸ್ವಿಯಾಗಿ ಪೂರೈಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆ. ನಿಮ್ಮ ಪ್ರತಿಭೆ, ವರ್ಚಸ್ಸು ತಲೆಮಾರುಗಳವರೆಗೆ ಪ್ರೇರಣೆ’ ಎಂದು ಬರೆದುಕೊಂಡಿದ್ದಾರೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟಿನ ಈ ನಟ ಕನ್ನಡ ಪ್ರೇಕ್ಷಕನ ಮನಸಿನಿಂದ ಎಂದೂ ಕಾಣೆಯಾಗೋದಿಲ್ಲ. ಬಯಲುದಾರಿಯ ಹೆಲಿಕಾಪ್ಟರಿನೊಳಗೆ, ‘ನಾರದ ವಿಜಯ’ದ ತಂಬೂರಿ ಜೊತೆಗೆ, ‘ಗಣೇಶನ ಮದುವೆ’ಯ ವಠಾರದಲ್ಲಿ, ‘ಬೆಳದಿಂಗಳ ಬಾಲೆ’ಯ ಕನಸಿನೊಳಗೆ, ‘ಮುಂಗಾರುಮಳೆ’ಯ ಕಣ್ಣೀರಿನಲ್ಲಿ ಅವರ ಜೊತೆ ಒದ್ದೆಯಾದವರೆಷ್ಟೋ.

ನಟ ರಿಷಬ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಅನಂತ್‌ನಾಗ್ ಅಭಿನಯದ ಚಿತ್ರಗಳ ವಿಶೇಷ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಅನಂತ ಪದ್ಮನಾಭರಿಗೆ ಅನಂತ ಶುಭಾಶಯಗಳು’ ಎಂದು ಶುಭ ಹಾರೈಸಿದ್ದಾರೆ.

ಡಾನ್ಸು, ಫೈಟು ಮಾಡದೆಯೂ ಹೆಣ್ಣುಮಕ್ಕಳ ಹೃದಯ ಗೆಲ್ಲಬಹುದು ಅಂತ ತೋರಿಸಿಕೊಟ್ಟ ಹೀರೋ ಅನಂತ ನಾಗ್. ಇಂಥ ಅದ್ವಿತೀಯ ನಟನಿಗೆ ‘ಪ್ರಜಾವಾಣಿ’ಯ ಚೊಚ್ಚಲ ‘ಸಿನಿ ಸಮ್ಮಾನ’ದಲ್ಲಿ ‘ಜೀವಮಾನ ಶ್ರೇಷ್ಠ ಸಾಧನೆ’ ಪುರಸ್ಕಾರ ನೀಡಿ ಗೌರವಿಸಿತ್ತು.

ಕಳೆದ ವರ್ಷ ಅನಂತ ನಾಗ್ ನಟನೆಯ ‘ತಿಮ್ಮಯ್ಯ & ತಿಮ್ಮಯ್ಯ’, ‘ಗಾಳಿಪಟ 2’, ‘ವಿಜಯಾನಂದ’, ‘ಮೇಡ್ ಇನ್ ಬೆಂಗಳೂರು’ ಸಿನಿಮಾಗಳು ತೆರೆ ಕಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.