ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ಸಿನಿಮಾಗೆ ನಾಯಕನಾದ ಕನ್ನಡಿಗ ಅನಿಲ್‌ ಸಿದ್ದು

Last Updated 23 ಮಾರ್ಚ್ 2022, 9:18 IST
ಅಕ್ಷರ ಗಾತ್ರ

ನಟಿ ಹನ್ಸಿಕಾ ಮೋಟ್ವಾನಿ ಅಭಿನಯಿಸುತ್ತಿರುವ ತಮಿಳಿನ ಹೊಸ ಸಿನಿಮಾದಲ್ಲಿ ಕನ್ನಡಿಗ ಅನಿಲ್‌ ಸಿದ್ದು ನಾಯಕರಾಗಿ ನಟಿಸುತ್ತಿದ್ದಾರೆ.

ಈ ಚಿತ್ರದ ಹೆಸರು ಇನ್ನು ಅಧಿಕೃತವಾಗಿ ಪ್ರಕಟವಾಗಿಲ್ಲ. ಅನಿಲ್‌ ಮತ್ತು ಹನ್ಸಿಕಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಅನಿಲ್‌ ಸಿದ್ದು ಕನ್ನಡದ ಹಲವು ಸಿನಿಮಾಗಳಲ್ಲಿ ಖಳ ನಾಯಕರಾಗಿ ಅಭಿನಯಿಸಿದ್ದಾರೆ. ಹಾಗೇ ಅವರು ತಮಿಳು ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿದ್ದರು.

ವಿಕ್ರಂ, ಸಿಂಬು, ವಿಜಯ್‌ ಸೇತುಪತಿ ಅವರ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ವಿಜಯ ಚಂದರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಸಬರಾದಶರವಣ-ಶಬರಿ ಜಂಟಿಯಾಗಿಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ಕನ್ನಡ, ತೆಲುಗು ಹಾಗೂ ತಮಿಳಿನ ಹಿರಿಯ ನಟರು ಅಭಿನಯಿಸುತ್ತಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT