ಕನ್ನಡ ಚಿತ್ರರಂಗಕ್ಕೆ ಹೊಸ ಅಲೆ ಮೂಡಿಸಿದ್ದ ಸಿನಿಮಾ ಕಾಂತಾರ. ಮೊದಲ ಭಾಗ ಹಾಗೂ ಕಾಂತಾರ– ಅಧ್ಯಾಯ1 ವಿಶ್ವದಾದ್ಯಂತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರ: ಇನ್‌ಸ್ಟಾಗ್ರಾಂ
ADVERTISEMENT
ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಲ್ಪನೆಯಲ್ಲಿ ಮೂಡಿಬಂದ ಸಿನಿಮಾ ಸಿನಿರಂಗದಲ್ಲಿ ಛಾಪು ಮೂಡಿಸಿದೆ. ಈ ಬಗ್ಗೆ ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
2025ರ ಅಕ್ಟೋಬರ್ 2ರಂದು ತೆರೆಕಂಡ ಕಾಂತಾರ ಅಧ್ಯಾಯ 1ರ ಚಿತ್ರೀಕರಣದ ಸಮಯದ ಫೋಟೊಗಳನ್ನು ರಿಷಬ್ ಹಂಚಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ಕುಲಶೇಖರನ ಪಾತ್ರವಿರುವ ಅರಮನೆಯಲ್ಲಿನ ದೃಶ್ಯಗಳು ಸೇರಿದಂತೆ ತೆರೆ ಹಿಂದಿನ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ಪೋಸ್ಟ್‌ನಲ್ಲಿ ‘ಕಲ್ಪನೆಯಲ್ಲಿದ್ದ ಜಗತ್ತಿಗೆ ಜೀವ ತುಂಬುತ್ತಿರುವ ಕ್ಷಣಗಳು’ ಎಂದು ಬರೆದಕೊಂಡಿದ್ದಾರೆ.
ಚಿತ್ರ: ಇನ್‌ಸ್ಟಾಗ್ರಾಂ
ಈ ಹಿಂದೆ ಕಾಂತಾರ ಅಧ್ಯಾಯ–1ಕ್ಕೆ ನಡೆಸಿದ ಕಾರ್ಯಾಗಾರ ಹೇಗಿತ್ತು ಎನ್ನುವ ಬಗ್ಗೆ ಫೋಟೊಗಳನ್ನು ರಿಷಬ್ ಹಂಚಿಕೊಂಡಿದ್ದರು.
ಚಿತ್ರ: ಇನ್‌ಸ್ಟಾಗ್ರಾಂ
‘ನಮ್ಮ ಕಥೆಯ ಎಳೆಯನ್ನು ತಿಳಿಸಿದ ಕ್ಷಣ ಇದು. ಕಾಗದದ ಮೇಲೆ ಬರೆದಿದ್ದ ಪಾತ್ರವು ನನ್ನ ನಟರ ಮೂಲಕ ಜೀವ ಪಡೆದ ಕ್ಷಣ. ನಮ್ಮ ಮೊದಲ ಕಾರ್ಯಾಗಾರವು ಕೇವಲ ಪೂರ್ವಾಭ್ಯಾಸವಾಗಿರಲಿಲ್ಲ. ಅದು ಕಲ್ಪನೆಗೆ ಭಾವನೆಗಳಿಗೆ ಜೀವ ತುಂಬಿತು. ಕಾಂತಾರ ತಂಡದ ಬಗ್ಗೆ ನನಗೆ ಅಪಾರ ಪ್ರೀತಿ ಇದೆ’ ಎಂದು ಬರೆದುಕೊಂಡಿದ್ದರು.