ಶನಿವಾರ, ಅಕ್ಟೋಬರ್ 24, 2020
18 °C

ತೆರೆ ಬರಲು ಸಜ್ಜಾದ ‘ಕಪಟಧಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗಿನ ಖ್ಯಾತ ನಟ ಸುಮಂತ್‌ ಅವರ  ಹೊಸ ಚಿತ್ರ ಕಪಟಧಾರಿ ತೆರೆಗೆ ಬರಲು ಸಿದ್ಧವಾಗಿದೆ. ಸುಮಾರು 6 ತಿಂಗಳ ಕಾಲ ಮನೆಯಲ್ಲಿದ್ದುಕೊಂಡೇ ಚಿತ್ರ ಸಂಬಂಧಿಸಿದ ಕೆಲಸ ಮಾಡುತ್ತಿದ್ದ ಸುಮಂತ್‌ ‘ಕಪಟಧಾರಿ’ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಾರೆ.

‘ಕಪಟಧಾರಿ’ ಬಿಡುಗಡೆಗೆ ಕಾಯುತ್ತಿದೆ. ಪರಿಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಕೊನೆಗೂ ನನ್ನ ಮುಂದಿನ ಚಿತ್ರೀಕರಣ ಆರಂಭವಾಗಿದೆ’ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

ಸರಣಿ ಸೋಲಿನ ಚಿತ್ರಗಳ ಬಳಿಕ 2017ರಲ್ಲಿ ಅವರು ಮಲ್ಲಿ ರಾವ ಚಿತ್ರದ ಮೂಲಕ ಮತ್ತೆ ಯಶಸ್ಸಿನತ್ತ ಹೊರಳಿದರು. ‘ಸುಬ್ರಹ್ಮಣ್ಯಪುರಂ’ ಸಿನಿಮಾ ಕೂಡಾ ಅವರಿಗೆ ಒಳ್ಳೆಯ ಯಶಸ್ಸು ತಂದುಕೊಟ್ಟಿತು. 

ಈಗ ಕಪಟಧಾರಿ ಚಿತ್ರದಲ್ಲಿ ಅವರು ಗೌತಮ್‌ ಹೆಸರಿನ ಟ್ರಾಫಿಕ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಪ್ರದೀಪ್ ಕೃಷ್ಣಮೂರ್ತಿ ನಿರ್ದೇಶಿಸಿದ್ದಾರೆ. ವಿಜಯ್‌ ಆ್ಯಂಟೊನಿ, ನಂದಿತಾ ಶ್ವೇತಾ, ಜಯಪ್ರಕಾಶ್‌, ವೆನ್ನೆಲಾ ಕಿಸೋರ್‌, ಸುಮನ್‌ ರಂಗನಾಥ್‌ ಮತ್ತು ಸಂಪತ್‌ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು