ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಿಲ್ ಜತೆಗೆಸಿಂಗ್‌ ವಾಸ್ತವ್ಯ!

Last Updated 9 ಮೇ 2019, 19:46 IST
ಅಕ್ಷರ ಗಾತ್ರ

ನಟ ರಣವೀರ್ ಸಿಂಗ್ 10 ದಿನಗಳ ಮಟ್ಟಿಗೆ ತಮ್ಮ ವಾಸ್ತವ್ಯವನ್ನು ದೆಹಲಿಗೆ ಸ್ಥಳಾಂತರಿಸಿದ್ದಾರೆ. ಯಾಕೆ ಅಂತೀರಾ? ‘83’ ಸಿನಿಮಾಕ್ಕಾಗಿ ರಣವೀರ್, ದೆಹಲಿಯಲ್ಲಿರುವ ಕ್ರಿಕೆಟಿಗ ಕಪಿಲ್ ದೇವ್ ಅವರ ಮನೆಯಲ್ಲಿ ತಂಗಲಿದ್ದಾರಂತೆ. ಭಾರತೀಯ ಕ್ರಿಕೆಟ್‌ನ ದಂತಕಥೆ ಕಪಿಲ್ ದೇವ್ ನೇತೃತ್ವದ ತಂಡ 1983ರಲ್ಲಿ ವಿಶ್ವಕಪ್ ಗೆದ್ದ ಕಥೆಯನ್ನು ‘83’ ಚಿತ್ರ ಆಧರಿಸಿದೆ.

‘ಪದ್ಮಾವತ್’ ಸಿನಿಮಾದ ಅಲ್ಲಾ
ವುದ್ದೀನ್ ಖಿಲ್ಜಿ ಪಾತ್ರಕ್ಕಾಗಿ ತಿಂಗಳ ಕಾಲ ಏಕಾಂಗಿಯಾಗಿ ಮನೆಯಲ್ಲೇ ಸಿದ್ಧತೆ ನಡೆಸಿ ರಣವೀರ್ ಹೆಸರಾಗಿದ್ದರು. 1983ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿದ್ದ ಕಪಿಲ್ ದೇವ್ ಆ ದಿನಗಳಲ್ಲಿ ಎದುರಿಸಿದ್ದ ಒತ್ತಡ, ವಿಶ್ವಕಪ್‌ಗಾಗಿ ನಡೆಸಿದ್ದ ತಯಾರಿ ಎಲ್ಲದರ ಕುರಿತು ರಣವೀರ್, ಕಪಿಲ್ ಅವರಿಂದ ಮಾಹಿತಿ ಪಡೆದು, ಕ್ರಿಕೆಟ್ ಬಗ್ಗೆಯೂ ತರಬೇತಿ ಪಡೆಯಲಿದ್ದಾರಂತೆ.

‘83’ ಸಿನಿಮಾದಲ್ಲಿ ರಣವೀರ್ ಕಬೀರ್ ಖಾನ್ ಪಾತ್ರದಲ್ಲಿ ನಟಿಸಲಿದ್ದಾರೆ. ‘ಧರ್ಮಶಾಲಾದಲ್ಲಿ ಕಪಿಲ್ ಸರ್ ಜತೆಗೆ ಎರಡು ದಿನಗಳಿಂದ ಇದ್ದೇನೆ. ಅವರು ತುಂಬಾ ತಾಳ್ಮೆಯ ಮನುಷ್ಯ. ಜೀವಂತ ದಂತಕತೆ ವ್ಯಕ್ತಿಯ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ನಾನು ನಟಿಸುತ್ತಿದ್ದೇನೆ. ಆ ಪಾತ್ರಕ್ಕೆ ರಕ್ತಮಾಂಸದ ಜತೆಗೆ ಜೀವ ತುಂಬಿ ನಟಿಸುವ ಜವಾಬ್ದಾರಿಯೂ ಇದೆ. ಕಪಿಲ್ ಅವರಂಥ ಲೆಜೆಂಡ್ ಜೊತೆ ಕಲಿಯುವ ಅವಕಾಶ ಸಿಕ್ಕಿರುವುದು ಮತ್ತು ಅವರ ಪಾತ್ರಕ್ಕೆ ನಟಿಸುತ್ತಿರುವುದು ನನಗೆ ಥ್ರಿಲ್ ಆಗುತ್ತಿದೆ’ ಎಂದು ರಣವೀರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT